ಉಡುಪಿ ಜಿಲ್ಲೆಯಲ್ಲಿ ಸಾಗರ ಕವಚ ಕಾರ್ಯಾಚರಣೆ ಆರಂಭ; ಎಲ್ಲೆಡೆ ಕಟ್ಟೆಚ್ಚರ

Spread the love

ಉಡುಪಿ ಜಿಲ್ಲೆಯಲ್ಲಿ ಸಾಗರ ಕವಚ ಕಾರ್ಯಾಚರಣೆ ಆರಂಭ; ಎಲ್ಲೆಡೆ ಕಟ್ಟೆಚ್ಚರ

ಉಡುಪಿ: ಭಯೋತ್ಪಾದಕ ದಾಳಿ ಹಾಗೂ ಇತರ ಕೃತ್ಯಗಳನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಯಾವ ರೀತಿ ಅನುಸರಿಸಬೇಕು ಮತ್ತು ಭದ್ರತಾ ದೃಷ್ಟಿಯಿಂದ ಪ್ರಸ್ತುತ ರಕ್ಷಣಾ ಕ್ರಮಗಳು ಮತ್ತು ಸಿದ್ಧತೆಗಳು ಯಾವ ರೀತಿ ಸಮರ್ಥವಾಗಿವೆ ಎನ್ನುವುದನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಉದ್ದೇಶದಿಂದ ಎರಡು ದಿನಗಳ ಸಾಗರ ಕವಚ ಕಾರ್ಯಾ ಆರಂಭವಾಯಿತು.

ರಾಜ್ಯ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ ಹಾಗೂ ಭಾರತೀಯ ನೌಸೇನೆ ಜಂಟಿಯಾಗಿ ಸಾಗರ ಕವಚ ಅಣುಕು ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.

ಬುಧವಾರ ಬೆಳಗಿನ 8 ಗಂಟೆಯಿಂದ ಪ್ರಾರಂಭಿಸಲಾಯಿತು. ಅಣಕು ಕಾರ್ಯಾಚರಣೆಯ ಸಂದರ್ಭದಲ್ಲಿ, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳು, ಬೀಚ್ ಗಳು, ದೇವಸ್ಥಾನ, ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ವ್ಯಾಪಕ ತಪಾಸಣೆ ನಡೆಯಿತು .ಸಂಜೆತನಕ ಯಾವೊಂದು ಭಯೋತ್ಪಾದಕ ಕೃತ್ಯ ಬಯಲಿಗೆ ಬಂದಿರಲಿಲ್ಲ.

ಕಾರ್ಯಚರಣೆಯ ಕುರಿತು ಮ್ಯಾಂಗಲೋರಿಯನ್ ಜೊತೆ ಮಾತನಾಡಿದ ಕರಾವಳಿ ಕಾವಲು ಪಡೆ ಮಲ್ಪೆ ಇದರ ಪೊಲೀಸ್ ವರಿಷ್ಟಾಧಿಕಾರಿ ಚೇತನ್ ಆರ್ ಮಾತನಾಡಿ ಇದೊಂದು ಅಣುಕು ಕಾರ್ಯಾಚರಣೆಯಾಗಿದ್ದು ರಾಜ್ಯ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ ಹಾಗೂ ಭಾರತೀಯ ನೌಸೇನೆ ಜಂಟಿಯಾಗಿ ನಡೆಸಲಾಗುತ್ತದೆ. ಉಗ್ರರ ದಾಳಿಗಳಾದ ವೇಳೆ ಇಲಾಖೆ ಯಾವ ರೀತಿ ಸಜ್ಜಾಗಿರಬೇಕು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಭಾರತದ ಕರಾವಳಿಯಲ್ಲಿ ಇರುವ ಮೀನುಗಾರರ ರಕ್ಷಣೆ ಕೂಡ ಇದರ ಒಂದು ಭಾಗವಾಗಿದ್ದು ಅವರ ಸಹಕಾರ ಕೂಡ ಈ ಕಾರ್ಯಾಚರಣೆಗೆ ಪಡೆಯಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ಇಂತಹ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ ಎಂದರು.


Spread the love