ಉಡುಪಿ: ಲಯನ್ಸ್ ಕ್ಲಬ್ ಇಂದ್ರಾಳಿ ಬೆಳ್ಳಿಹಬ್ಬ ; ಮೇ 1- 6 `ಘರ್ಜನೆ-2015′ ಸಾಂಸ್ಕೃತಿಕ ಕಾರ್ಯಕ್ರಮ

Spread the love

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಬೆಳ್ಳಿಹಬ್ಬದ ಆಚರಣೆಯ ಪೂರ್ವಭಾವಿಯಾಗಿ `ಘರ್ಜನೆ-2015′ ಸಾಂಸ್ಕೃತಿಕ ಸೇವಾ ವೈಭವ ಕಾರ್ಯಕ್ರಮ ಮೇ1ರಿಂದ 6ರ ವರೆಗೆ ಪ್ರತಿದಿನ ಸಾಯಂಕಾಲ 6ರಿಂದ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿ ನಡೆಯಲಿದೆ ಎಂದು `ಘರ್ಜನೆ 2015ರ ಮಹಾ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಮೇ 1ರಂದು ಘರ್ಜನೆ 2015 ಉದ್ಘಾಟನೆಗೊಳ್ಳಲಿದೆ. ಅಂದಿನಿಂದ ಪ್ರತಿದಿನ ಹಿರಿತನ, ವೃತ್ತಿಪರತೆ, ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆಯ ಆಧಾರದಲ್ಲಿ ನಗರಸಭೆ `ಡಿ’ ಶ್ರೇಣಿಯ ನೌಕರರು, ಅಂಚೆ ಇಲಾಖೆಯ ಪೋಸ್ಟ್ಮ್ಯಾನ್, ಮೆಸ್ಕಾಂನ ಲೈನ್ ಮ್ಯಾನ್, ಬಸ್ ಚಾಲಕರು, ವಿಕಲಚೇತನ ಅಧ್ಯಾಪಕಿಯರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಅಲ್ಲದೆ ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಮಾಜಸೇವೆ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಮಂದಿ ಸಾಧಕರಿಗೆ `ಲಯನ್ಸ್ ನವರತ್ನ-2015′ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಉಡುಪಿ ಮಣಿಪಾಲ ನಡುವಿನ ಲಕ್ಷ್ಮೀಂದ್ರ ನಗರದಲ್ಲಿ ಬಸ್ ತಂಗುದಾಣ ಉದ್ಘಾಟನೆಯೂ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಅಂಗವಾಗಿ ಮೇ 1ರಂದು 10-15 ವಯೋಮಿತಿಯ ಮಕ್ಕಳ ಪ್ರತಿಭಾನ್ವೇಷಣೆ ಸ್ಪರ್ಧೆ ನಡೆಯಲಿದೆ. ಮೇ 2ರಂದು ತಾಯಂದಿರಿಗಾಗಿ `ಸುಪರ್ ಮೋಮ್’ ಸ್ಪರ್ಧೆ, ಮೇ 3ರಂದು `ಆದರ್ಶ ದಂಪತಿ’ ಸ್ಪರ್ಧೆ , ಮೇ 4,5 ಮತ್ತು 6ರಂದು 20-20 ಕುಸಾಲ್ ಹಾಸ್ಯ ಸ್ಪರ್ದೆ ನಡೆಯಲಿದೆ ಎಂದು ಅವರು ತಿಳಿಸಿದರು.
ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿಯ ಅಧ್ಯಕ್ಷ ರತ್ನಾಕರ ಇಂದ್ರಾಳಿ, ವಲಯ ಸಭಾಪತಿ ಮೋಹನ್ ಎಂ.ಪಿ., ಘರ್ಜನೆ ಸಹ ನಿರ್ದೇಶಕ ಮೌಹಮ್ಮದ್ ಮೌಲಾ, ಲಯನ್ಸ್ ಕ್ಲಬ್ ಕಾರ್ಯದಶರ್ಿ ಸುದೇಶ್ ಶೆಟ್ಟಿ, ಲಯನೆಸ್ ಕ್ಲಬ್ ಉಡುಪಿ ಇಂದ್ರಾಳಿಯ ಅಧ್ಯಕ್ಷೆ ಸವಿತಾ ಜೆ. ಶೆಟ್ಟಿ ಉಪಸ್ಥಿತರಿದ್ದರು.


Spread the love