ಏಸ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

Spread the love

ಏಸ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

ಮಂಗಳೂರು: ಯು2 ಸಿನಿಮಾ ಟಾಕೀಸ್ ಲಾಂಛನದಲ್ಲಿ ತಯಾರಾದ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ನಿರ್ಮಿಸಿರುವ ಎಂ.ಎನ್. ಜಯಂತ್ ಚಿತ್ರಕತೆ ನಿರ್ದೇಶನದ ಶೋಭರಾಜ್ ಪಾವೂರು ಕತೆ, ಸಂಭಾಷಣೆ ಬರೆದಿರುವ `ಏಸ’ ತುಳು ಚಲನಚಿತ್ರದ ಬಿಡುಗಡೆ ಸಮಾರಂಭವು ಜ್ಯೋತಿ ಚಿತ್ರಮಂದಿರದಲ್ಲಿ ಜರಗಿತು.

ಉದ್ಯಮಿ ಡಾ.ಜೀವಂಧರ್ ಬಲ್ಲಾಳ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು ಸಿನಿಮಾರಂಗ ಈಗ ಸಮೃದ್ಧವಾಗಿ ಬೆಳೆಯುತ್ತಿದೆ. ತುಳು ಸಿನಿಮಾಗಳ ಮೂಲಕ ಮನರಂಜನೆಯ ಜತೆಗೆ ಉತ್ತಮ ಸಂದೇಶವೂ ಸಮಾಜಕ್ಕೆ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿ ಭಾಸ್ಕರ ಕೋಟ್ಯಾನ್ ಮಾತನಾಡಿ ತುಳು ಸಿನಿಮಾರಂಗದ ಮಾರುಕಟ್ಟೆ ಈಗ ವಿಸ್ತಾರವಾಗಿ ಬೆಳೆಯುತ್ತಿದೆ. ಜನರು ತುಳು ಸಿನಿಮಾಗಳನ್ನು ಪ್ರೋತ್ಸಾಹಿಸಿ ತುಳು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗ ಬೇಕೆಂದರು.

ಖ್ಯಾತ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು ಮಾತನಾಡಿ ಸೀಮಿತ ಮಾರುಕಟ್ಟೆಯ ತುಳು ಚಿತ್ರರಂಗದಲ್ಲಿ ಬರುತ್ತಿರುವ. ಎಲ್ಲಾ ಚಿತ್ರಗಳನ್ನು ಪ್ರೇಕ್ಷಕರು ನೋಡುವಂತಾಗಬೇಕು. ನಮ್ಮ ತುಳು ಸಿನಿಮಾರಂಗ ಕನ್ನಡ ತೆಲುಗು, ತಮಿಳು ಚಿತ್ರರಂಗದಂತೆ ಬೆಳೆಯುವಂತಾಗಲಿ ಎಂದರು. ಮುಖ್ಯ ಅತಿಥಿಗಳಾಗಿ ವಿಜಯಕುಮಾರ್ ಕೊಡಿಯಾಲ್ ಬೈಲ್, ಕಿಶೋರ್ ಡಿ.ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್ ಜಗದೀಶ್ ಅಧಿಕಾರಿ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಿಶೋರ್ ಕೊಟ್ಟಾರಿ, ನಿರ್ಮಾಪಕರಾದ ಉದಯ ಶೆಟ್ಟಿ ಕಾಂತಾವರ, ಉದಯ ಸಾಲ್ಯಾನ್, ಅರವಿಂದ ಬೋಳಾರ್, ಉದಯ ಶೆಟ್ಟಿ ಇನ್ನಾ, ಭೋಜರಾಜ್ ವಾಮಂಜೂರು, ನಾಯಕ ನಟ ರಾಹುಲ್, ನಟಿ ರಾಧಿಕಾ, ಶೋಭರಾಜ್ ಪಾವೂರು, ಎಂ.ಎನ್.ಜಯಂತ್ ಮೊದಲಾದವರು ಉಪಸ್ಥಿತರಿದ್ದರು ವಿನಿತ್ ಕಾರ್ಯಕ್ರಮ ನಿರ್ವಹಿಸಿದರು.

ಯಕ್ಷಗಾನ ಕಲಾವಿದನೊಬ್ಬನ ಬದುಕಿನ ಕಥಾನಕ ಏಸ ಚಿತ್ರದಲ್ಲಿದೆ. ಏಸ ಸಿನಿಮಾವು ಮಂಗಳೂರಿನಲ್ಲಿ ಜ್ಯೋತಿ ಬಿಗ್‍ಸಿನಿಮಾಸ್, ಪಿವಿಆರ್, ಸಿನಿಪೆÇಲೀಸ್, ಉಡುಪಿಯಲ್ಲಿ ಕಲ್ಪನ, ಸುರತ್ಕಲ್‍ನಲ್ಲಿ ನಟರಾಜ್, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್, ಮಣಿಪಾಲದಲ್ಲಿ ಐನಾಕ್ಸ್, ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ ಚಿತ್ರಮಂದಿರದಲ್ಲಿ ಸಿನಿಮಾ ಏಕಕಾಲದಲ್ಲಿ ತೆರೆಕಂಡಿದೆ.


Spread the love