ಕರ್ನಾಟಕದಲ್ಲಿ ವೃತ್ತಿಪರ ಐ.ಎ.ಎಸ್. / ಐ.ಎಫ್.ಎಸ್. ಶಿಕ್ಷಣದ ಅಗತ್ಯ: ಜೆ. ಆರ್. ಲೋಬೊ

Spread the love

ಕರ್ನಾಟಕದಲ್ಲಿ ವೃತ್ತಿಪರ ಐ.ಎ.ಎಸ್. ಐ.ಎಫ್.ಎಸ್. ಶಿಕ್ಷಣದ ಅಗತ್ಯ: ಜೆ. ಆರ್. ಲೋಬೊ

ಮಂಗಳೂರು : ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿUಳನ್ನು ಸೃಷ್ಟಿಸುವಲ್ಲಿಕ ವೃತ್ತಿಪರವಾದ ಶಿಕ್ಷಣ ಸಂಸ್ಥೆಯ ಅಗತ್ಯವಿದೆ ಎಂದು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶ್ರೀ. ಜೆ.ಆರ್.ಲೋಬೊ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಅವರು ಕರ್ನಾಟಕ ಕಥೋಲಿಕ ಕೊಂಕಣಿ ಸಂಘUಳ ಒಕ್ಕೂಟ(ರಿ) ಇದರ 21ನೇ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದರು.

ಕೊಂಕಣಿ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದೆ. ಸೇವಾ ಕ್ಷೇತ್ರದಲ್ಲಿ ಕೊಂಕಣಿ ಸಮುದಾಯವನ್ನು ಮೀರಿಸುವ ಬೇರೆ ಸಮುದಾವಿಲ್ಲ. ಆದರೆ ದೇಶದ ಆಡಳಿತ ಕ್ಷೇತ್ರದಲ್ಲಿ ಮಾತ್ರ ನಾವು ಮುಂದೆ ಬಂದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಮ್ಮ ಯುವಜನತೆ ಆಸಕ್ತಿ ಹೊಂದಿಲ್ಲ. ಎಂದರು.

ಸಮಾವೇಶದ ಮುಖ್ಯ ಅಥಿತಿಗಳಾದ ಕರ್ನಾಟಕ ಲೋಕಾಯುಕ್ತ ಜಸ್ಟೀಸ್ ಪಿ. ವಿಶ್ವನಾಥ ಶೆಟ್ಟಿ ಮಾತನಾಡಿ “ಉತ್ತರ ಪ್ರದೇಶದ ಪ್ರತಿಯೊಂದು ಗಲ್ಲಿಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಗಳಿಗೆ ಅಭ್ಯರ್ಥಿಗಳನ್ನು ತಯಾರು ಮಾಡುವ ತರಬೇತಿ ಸಂಸ್ಥೆಗಳನ್ನು ಕಾಣಬಹುದು. ಆದರೆ ನಮ್ಮ ಕರ್ನಾಟಕದಲ್ಲಿ ಇಂತಹ ಸಂಸ್ಥೆಗಳಿಲ್ಲ”. ಎಂದರು.

ಕರ್ನಾಟಕ ಸರಕಾರದ ಮುಖ್ಯ ಸಚೇತಕರಾದ ಐವನ್ ಡ’ಸೋಜ ಅವರು ಇದಕ್ಕೆ ಪೂರಕವಾಗಿ “ಮಂಗಳುರು ಜನರು ಬಹಳ ಬುದ್ಧಿವಂತರು ಎಂದು ಹೋದಲ್ಲೆಲ್ಲ ಹೊಗಳುತ್ತಾರೆ. ಆದರೆ ಆಡಳಿತದ ಕ್ಷೇತ್ರದಲ್ಲಿ ಮಾತ್ರ ನಮ್ಮ ಬುದ್ಧಿವಂತಿಕೆ ಕೆಲಸ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಕೊಂಕಣಿ ಯುವಜನತೆ ಶಿಕ್ಷಣ ಮುಗಿದ ತಕ್ಷಣವೇ ಹೊರರಾಷ್ಟ್ರಗಳ ಕೆಲಸವನ್ನು ಹುಡುಕುತ್ತದೆ. ಕೇವಲ ಶಾಸಕರು, ರಾಜಕೀಯ ಮುಖಂಡರು ಕೆಲಸ ಮಾಡಿಲ್ಲ ಎಂದು ಹೇಳುವುದು ಸುಲಭ ಆದರೆ ಆಡಳಿತ ಕ್ಷೇತ್ರದಲ್ಲಿ ನಮ್ಮವರು ಇಲ್ಲದಿದ್ದರೆ ಯಾವುದೇ ರಾಜಕೀಯ ಫುಡಾರಿ ಏನೂ ಮಾಡಲು ಸಾಧ್ಯವಿಲ್ಲ” ಎಂದರು.

ಕರ್ನಾಟಕ ಕಥೋಲಿಕ ಕೊಂಕಣಿ ಸಂಘUಳ ಒಕ್ಕೂಟ(ರಿ) ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಆನಂದ್ ಡಿ’ಸೋಜಾ ಅವರು ನೆರೆದವರನ್ನು ಸ್ವಾಗತಿಸಿ ಎಫ್.ಕೆ.ಸಿ.ಎ ತನ್ನ ಸುಪರ್ದಿಯಲ್ಲಿ 32 ಸಂಘಗಳ ಸದಸ್ಯತ್ವªನ್ನು ಹೊಂದಿದ್ದು, ಮಂUಳೂರು, ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಕುವೈಟ್, ದುಬೈ, ಅಬುಧಾಬಿ, ಓಮಾನ್, ಕೆನಡಾ, ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಮತ್ತು ಇಂಗ್ಲೆಂಡ್-ನ ಸಂಸ್ಥೆಗಳನ್ನು ಒಳಗೊಂಡಿದೆ.

ಒಕ್ಕೂಟವು ಸಮಾಜಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಮುದಾಯದ ಮೂವರು ಆದರ್ಶ ವ್ಯಕ್ತಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ. ಪ್ರಸ್ತುತ ವರ್ಷದಲ್ಲಿ ಜೀವಮಾನ ಸಾಧನೆಗಾಗಿ  ಪೌಲ್ ಮೊರಾಸ್, ವೃತ್ತಿಪರ ಸಾಧನೆಗಾಗಿ ಶ್ರೀಮತಿ ಕೊರೇನ್   ರಸ್ಕೀನ್ಹಾ ಹಾಗೂ ವರ್ಷದ ಉದ್ಯಮಿಯನ್ನಾಗಿ   ವಿವೇಕ್ ಅರಾನ್ಹ ಅವರಿಗೆ ಪ್ರದಾನ ಮಾಡಲಾಗಿದೆ.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ಕುಟಿನ್ಹೊ, ಅವರು ವಾರ್ಷಿಕ ವರದಿಯನ್ನು ಸಲ್ಲಿಸಿದ್ದು, ಶ್ರೀಮತಿ ಕ್ಲೆಮೆನ್ಸ್ ಡಿ’ಸಿಲ್ವಾ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.

ಸಮಾವೇಶದ ಸಾಂಸ್ಕøತಿಕ ಕಾಂiÀರ್iಕ್ರಮದ ಭಾಗವಾಗಿ ಕಲಾಕುಲ್ ತಂಡದ ಶ್ರೀ ಅರುಣ್ ರಾಜ್ ನಿರ್ದೇಶನದಲ್ಲಿ ರಚಿತವಾದ “ಯುವರ್ಸ್ ಒಬೀಡಿಯಂಟ್ಲಿ” ನಾಟಕ ಹಾಗೂ ನೃತ್ಯ ಪ್ರದರ್ಶನವನ್ನು ಆಯೋಜಿಲಾಗಿತ್ತು.


Spread the love