ಕೃಷ್ಣಾಷ್ಟಮಿ ; ಕೋವಿಡ್-19 ಜಾಗೃತಿಗಾಗಿ ರವಿ ಕಟಪಾಡಿಯಿಂದ ಈ ಬಾರಿ ‘ಕರೋನಾ ಇನ್ ಡ್ರ್ಯಾಗನ್’ ವೇಷ

Spread the love

ಕೃಷ್ಣಾಷ್ಟಮಿ ; ಕೋವಿಡ್-19 ಜಾಗೃತಿಗಾಗಿ ರವಿ ಕಟಪಾಡಿಯಿಂದ ಈ ಬಾರಿ ‘ಕರೋನಾ ಇನ್ ಡ್ರ್ಯಾಗನ್’ ವೇಷ

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಒಂದು ನಿರ್ದಿಷ್ಠ ಉದ್ದೇಶವನ್ನು ಇಟ್ಟುಕೊಂಡು ವಿಶೇಷ ವೇಷ ಧರಿಸಿಕೊಂಡು ಜನಪ್ರಿಯತೆಯನ್ನು ಗಳಿಸಿಕೊಂಡಿರುವ ರವಿ ಕಟಪಾಡಿ ಮತ್ತು ತಂಡ ಈ ಬಾರಿ ಜನಜಾಗೃತಿಯನ್ನು ಮೂಡಿಸುವ ಸಲುವಾಗಿ ಜಿಲ್ಲಾಡಳಿತದ ಅನುಮತಿಯ ಮೇರೆಗೆ ಕೋವಿಡ್ ಜಾಗೃತಿಯನ್ನು ಎಚ್ಚರಿಸಲು ಎರಡು ದಿನಗಳ ಕಾಲ ವೇಷದಾರಿಯಾಗಿ ತನ್ನ ತಂಡದೊಂದಿಗೆ ಕಟಪಾಡಿ ಉಡುಪಿ ಮಲ್ಪೆ ಪರಿಸರದಲ್ಲಿ ಎರಡು ದಿನಗಳ ಕಾಲ ಸುತ್ತಾಟ ನಡೆಸಲಿದ್ದಾರೆ. ಆದರೆ ಪ್ರತೀ ವರ್ಷ ತನ್ನದೇ ವೈಶಿಷ್ಡ್ಯತೆ ಮೂಲಕ ಗಮನ ಸೆಳೆಯೋ ರವಿ ಕಟಪಾಡಿ ಈ ಬಾರಿ ಕೊರೋನಾ ಡ್ರ್ಯಾಗನ್ ಆಗಿ ಮಿಂಚುತ್ತಿದ್ದಾರೆ

ಕಳೆದ ಎಂಟು ವರ್ಷಗಳಿಂದ ರವಿ ವಿಶೇಷ ವೇಷಗಳ ಮೂಲಕ ಗಮನಸೆಳೆದು ಹಣವನ್ನು ಮಾಡಿ ಕಷ್ಟದಲ್ಲಿರುವವರಿಗೆ ನೆರವು ನೀಡ್ತಾ ಬಂದಿದ್ದಾರೆ. ವೇಷಧಾರಿಯಾಗಿ ಸಂಗ್ರಹಿಸಲ್ಪಟ್ಟ ಹಣದಲ್ಲಿ ಅಸಹಾಯಕ ಬಡ ಮಕ್ಕಳ ಪಾಲಿಗೆ ಆಶಾದಾಯಕ ವಾದಂತಹ ಭರವಸೆಯನ್ನು ಮೂಡಿಸುತ್ತಿದ್ದ ರವಿ ಕಟಪಾಡಿ ಈ ಬಾರಿ ಕೋವಿಡ್ ಪರಿಣಾಮ ಧನ ಸಂಗ್ರಹವನ್ನು ಕೈಬಿಟ್ಟಿದ್ದು ಜನರಲ್ಲಿ ಕೋವಿಡ್ ವಿರುದ್ಧ ಜಾಗೃತಿಯನ್ನು ಮೂಡಿಸುವ ಸಲುವಾಗಿ ವೇಷದಾರಿಯಾಗಿ ಎಲ್ಲೆಡೆ ಸಂಚರಿಸಲಿದ್ದಾರೆ.

ಕಷ್ಟದಲ್ಲಿರೋ ಜನರು, ಭೀಕರ ಕಾಯಿಲೆಯಿಂದ ಬಳಲುತ್ತಿರೋ 58 ಮಂದಿಗೆ ಸುಮಾರು 50 ಲಕ್ಷಕ್ಕೂ ಹೆಚ್ಚು ಸಹಾಯವನ್ನು ರವಿ ಈಗಾಗಲೇ ಮಾಡಿದ್ದಾರೆ. ಇಂತದ್ದೇ ಸಹಾಯಕ್ಕಾಗಿ ರವಿಯವರಿಗೆ ಈ ಬಾರಿಯೂ ಕೂಡಾ 5 ಅರ್ಜಿಗಳು ಬಂದಿದ್ದು ಕೊರೋನಾದಿಂದಾಗಿ ಈ ಬಾರಿ ಹಣ ಸಂಗ್ರಹವನ್ನು ಕೈಬಿಟ್ಟಿದ್ದಾರೆ.

ಕಟ್ಟಡ ಕಾರ್ಮಿಕನಾಗಿ ದುಡಿಯೋ ರವಿ ಕಟಪಾಡಿ ಅಷ್ಟಮಿ ಬಂದ್ ಕೂಡಲೇ ಅವರ ಟೀಮ್ ನೊಂದಿಗೆ ರಿಸ್ಕ್ ತೆಗೆದುಕೊಂಡು ವಿಶೇಷ ವೇಷದೊಂದಿಗೆ ಗಮನ ಸೆಳೆಯುವ ರವಿ ಕಟಪಾಡಿ ತಮ್ಮ ಸಾಮಾಜಿಕ ಕಳಕಳಿಯ ಜೊತೆಗೆ ಅವರ ಅಪರೂಪದ ವೇಷ ಜನರ ಮನಸ್ಸನ್ನು ಗೆದ್ದಿದ್ದಾರೆ


Spread the love