ಜನವಿರೋಧಿ ಬಜೆಟ್ ದೇಶಕ್ಕೆ ಮಾರಕ – ವಸಂತ ಆಚಾರಿ 

Spread the love

ಜನವಿರೋಧಿ ಬಜೆಟ್ ದೇಶಕ್ಕೆ ಮಾರಕ – ವಸಂತ ಆಚಾರಿ 

 ಎರಡನೆಯ ಬಾರಿಗೆ ದೇಶದ ಅಧಿಕಾರದ ಗದ್ದುಗೆಯನ್ನೇರಿದ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಭಾರೀ ಭ್ರಮೆಯನ್ನು ಸ್ರಷ್ಠಿಸಿ ದೇಶದ ಅಭಿವ್ರದ್ದಿಯೇ ತನ್ನ ಮೊದಲ ಆದ್ಯತೆ ಎಂದು ಬೊಗಳೆ ಬಿಟ್ಟು ಮಂಡಿಸಿದ ತನ್ನ ಚೊಚ್ಚಲ ಬಜೆಟ್,ಎಲ್ಲಾ ಹಂತಗಳಲ್ಲೂ ವಿಫಲತೆಯನ್ನು ಕಾಣುವ ಮೂಲಕ ಜನವಿರೋಧಿ ಬಜೆಟ್ ಎಂದು ಸಾಬೀತಾಗಿದೆ.ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕಾದ ಕೇಂದ್ರ ಸರಕಾರವು ಉದ್ಯೋಗ ಸ್ರಷ್ಠಿಗೆ ಯಾವುದೇ ಯೋಜನೆಗಳಿಲ್ಲದೆ ನಿರುದ್ಯೋಗ ಸಮಸ್ಯೆ ಇನ್ನಷ್ಟು ಭೀಕರತೆಯನ್ನು ಕಾಣುವಂತಾಗಿದೆ.ಇದರಿಂದಾಗಿ ಇಡೀ ದೇಶದ ಅರ್ಥ ವ್ಯವಸ್ಥೆಯೇ ನಾಶವಾಗಲಿದ್ದು ದೇಶಕ್ಕೆ ಮಾರಕವಾಗಿ ಪರಿಣಮಿಸಲಿದೆ ಎಂದು ಸಿಪಿಐಎಮ್ ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿಯವರು ಅಭಿಪ್ರಾಯ ಪಟ್ಟರು.

ಅವರು ಜಪ್ಪಿನಮೊಗರು ಗ್ರಾಮ ಯುವಕ ಮಂಡಲದಲ್ಲಿ ಜರುಗಿದ 54ನೇ ಜಪ್ಪಿನಮೊಗರು ವಾರ್ಡ್ ಮಟ್ಟದ ಸಿಪಿಐಎಮ್ ಪಕ್ಷದ ಕಾರ್ಯಕರ್ತರ ಹಾಗೂ ಹಿತೈಷಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಾ,ಈ ಮಾತುಗಳನ್ನು ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಸಿಪಿಐಎಮ್ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು,  ಸ್ವತಂತ್ರ ಭಾರತದ ಇತಿಹಾಸದಲ್ಲೇ ಈ ಚುನಾವಣೆಗೆ ಖರ್ಚಾದಷ್ಟು ಹಣ ಯಾವತ್ತೂ ಆಗಿರಲಿಲ್ಲ.ಇಡೀ ಚುನಾವಣೆಗೆ 60,000 ಕೋಟಿ ರೂ.ಖರ್ಚಾಗಿದ್ದರೆ,ಅದರಲ್ಲಿ 29,000 ಕೋಟಿ ರೂ.ಕೇವಲ ಬಿಜೆಪಿ ಪಕ್ಷವೊಂದೇ ಖರ್ಚು ಮಾಡಿದೆ.ಇಷ್ಟೊಂದು ಅಗಾಧವಾದ ಹಣವನ್ನು ದೇಶದ ಗುತ್ತೇದಾರಿ ಬಂಡವಾಳಶಾಹಿಗಳು ತಮ್ಮ ಹಿತಾಸಕ್ತಿಯನ್ನು ಕಾಪಾಡಲು ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ನೀಡಿರುವುದು ಜಗಜ್ಜಾಹೀರಾಗಿದೆ.ವಾಸ್ತವತೆ ಹೀಗಿರುವಾಗ ತಮ್ಮ ಎದುರಾಳಿಗಳನ್ನು ಚುನಾವಣೆಯಲ್ಲಿ ಗೆಲ್ಲದಂತೆ ವ್ಯವಸ್ಥಿತ ಪಿತೂರಿ ಹೆಣೆಯಲಾಗಿದೆ.ಯಾವುದೇ ಕಾರಣಕ್ಕೂ ಕಮ್ಯುನಿಸ್ಟ್ ಪಕ್ಷಗಳು ಸಂಸತ್ತಿನಲ್ಲಿ ಇರಕೂಡದೆಂದು ಜಾಗತಿಕ ಬಂಡವಾಳಶಾಹಿಗಳೂ ಕೂಡ ಜೊತೆಗೂಡಿರುವುದು ಸಾಬೀತಾಗಿದೆ.ಇಂತಹ ಭ್ರಷ್ಟಾಚಾರದ ಕೂಪವಾಗಿರುವ ಚುನಾವಣೆಯಲ್ಲಿ ತಾತ್ಕಾಲಿಕ ಹಿನ್ನಡೆ ಕಂಡಿರುವ ಕಮ್ಯುನಿಸ್ಟ್ ಪಕ್ಷಗಳು ಸಂಸತ್ತಿನ ಹೊರಗಡೆ ಪ್ರಬಲವಾದ ಜನಚಳುವಳಿಯನ್ನು ಕಟ್ಟುವ ಮೂಲಕ ದೇಶವನ್ನಾಳುವ ಫ್ಯಾಸಿಸ್ಟರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ* ಎಂದು ಹೇಳಿದರು.

ಸಿಪಿಐಎಮ್  ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕ್ರಿಷ್ಣ ಶೆಟ್ಟಿಯವರು,  ಸ್ವಾತಂತ್ರ್ಯ ಪೂರ್ವದಿಂದಲೇ ಜಪ್ಪಿನಮೊಗರು ಗ್ರಾಮದಲ್ಲಿ ಬೆಳೆದು ಬಂದ ರೈತ ಕಾರ್ಮಿಕರ ಹೋರಾಟದ ಪರಂಪರೆಯನ್ನು ವಿವರಿಸುತ್ತಾ,ಜಪ್ಪಿನಮೊಗರು ಗ್ರಾಮ ಪಂಚಾಯತಿನಲ್ಲಿ ಅಧಿಕಾರ ನಡೆಸಿದ ಕಮ್ಯುನಿಷ್ಟರು,ಬಳಿಕ ನಗರಪಾಲಿಕೆ ಚುನಾವಣೆಯಲ್ಲಿಯೂ 2 ಬಾರಿ ಗೆಲ್ಲುವ ಮೂಲಕ ಜಪ್ಪಿನಮೊಗರು ವಾರ್ಡ್ ನಲ್ಲಿ ಸರ್ವ ವಿಭಾಗದ ಜನತೆಯ ಪ್ರೀತಿ ವಿಶ್ವಾಸವನ್ನು ಗಳಿಸಲು ಸಾಧ್ಯವಾಗಿದೆ.ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸಕಾರ್ಯಗಳನ್ನು ಮಾಡುವ ಮೂಲಕ ಮತ್ತೊಮ್ಮೆ ದುಡಿಯುವ ವರ್ಗದ ಕಣ್ಮಣಿಯಾಗಿ ಜಪ್ಪಿನಮೊಗರು ವಾರ್ಡ್ ಪ್ರಜ್ವಲಿಸಬೇಕೆಂದು* ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಿಪಿಐಎಮ್ ಯುವ ನಾಯಕರಾದ ಉದಯಚಂದ್ರ ರೈ, ಸಿಪಿಐಎಮ್ ಜಿಲ್ಲಾ ನಾಯಕರಾದ ಜಯಂತಿ ಬಿ.ಶೆಟ್ಟಿ, ದಿನೇಶ್ ಶೆಟ್ಟಿ, ಸಿಪಿಐಎಮ್ ಸ್ಥಳೀಯ ನಾಯಕರಾದ ಮನೋಜ್ ಶೆಟ್ಟಿ,ಚಂದ್ರಹಾಸ ಜೆ,ಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.


Spread the love