ಜಿಎಸ್‌ಟಿ ಇಳಿಕೆ ಜನತೆಗೆ ಖುಷಿ ನೀಡಿದ್ರೆ ಐವನ್, ಪದ್ಮರಾಜ್ ಗೆ ಏಕೆ ಉರಿ? ಅರುಣ್ ಶೇಟ್ ಪ್ರಶ್ನೆ

Spread the love

ಜಿಎಸ್‌ಟಿ ಇಳಿಕೆ ಜನತೆಗೆ ಖುಷಿ ನೀಡಿದ್ರೆ ಐವನ್, ಪದ್ಮರಾಜ್ ಗೆ ಏಕೆ ಉರಿ? ಅರುಣ್ ಶೇಟ್ ಪ್ರಶ್ನೆ

ಮಂಗಳೂರು: ಕೇಂದ್ರ ಸರ್ಕಾರ ಜಿಎಸ್‌ಟಿ ದರ ಇಳಿಕೆ ಮಾಡಿ ಜನತೆಗೆ ನೆಮ್ಮದಿ ನೀಡಿದರೆ, ರಾಜ್ಯ ಸರ್ಕಾರ ಪ್ರತಿಯೊಂದು ವಸ್ತುಗಳ ಬೆಲೆ ಏರಿಸಿ ಜನರ ಬದುಕಿಗೆ ಸಂಕಷ್ಟ ತಂದೊಡ್ಡಿದೆ. ಕೇಂದ್ರದ ಜಿಎಸ್‌ಟಿ ದರ ಇಳಿಕೆ ಕುರಿತು ಶಾಸಕ ವೇದವ್ಯಾಸ ಕಾಮತ್ ಮನೆಮನೆಗೆ ಕರಪತ್ರ ವಿತರಣೆ ಕಾರ್ಯ ಆರಂಭಿಸಿದಾಗ ಕಾಂಗ್ರೆಸ್ ನಾಯಕರಾದ ಐವನ್ ಡಿ’ಸೋಜಾ ಮತ್ತು ಪದ್ಮರಾಜ್ ಅವರಲ್ಲಿ ಹೊಟ್ಟೆಕಿಚ್ಚು ಶುರುವಾಗಿದೆ. ಜನರಿಗೆ ಸಿಗುತ್ತಿರುವ ಪ್ರಯೋಜನವೇ ಇವರಿಗೆ ಅಸಹ್ಯ,” ಎಂದು ವ್ಯಂಗ್ಯವಾಡಿದರು.

ಇತ್ತೀಚೆಗೆ ಪದ್ಮರಾಜ್ ಹಾಗೂ ಐವನ್ ಡಿಸೋಜಾ ಜಿಎಸ್‌ಟಿ ಹೇಳಿಕೆಗೆ ಕೌಂಟರ್ ನೀಡುವ ಸಲುವಾಗಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು “ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಜಿಎಸ್‌ಟಿ ಇಳಿಕೆಯಿಂದ ಜನರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಹಲವಾರು ಅಗತ್ಯ ವಸ್ತುಗಳಿಗೆ ಶೂನ್ಯ ದರ ವಿಧಿಸಲಾಗಿದೆ. ಇದರ ಪ್ರಯೋಜನ ಜನರ ಮನೆಮನೆಗೆ ತಲುಪುತ್ತಿದೆ,” ಎಂದರು.

ಐವನ್ ಡಿಸೋಜಾ ಅವರು ಜಿಎಸ್‌ಟಿ ಇಳಿಸಿದಕ್ಕೆ ಜನರು ಸೊಪ್ಪು ಹಾಕಿಲ್ಲ ಅನ್ತಾರೆ ಆದರೆ ಹಾಗೆ ಹೇಳುವ ಅವರು ಕಾಡಿನಲ್ಲಿ ಒಂದು ಸೊಪ್ಪು ಸಿಗದೆ ಬೇಕಾದ್ರೆ ಅವರು ಅದನ್ನು ಹಾಕಿಕೊಳ್ಳಬಹುದು ಎಂದರು. ಕಲ್ಲು-ಮರಳು ಸಮಸ್ಯೆ ನಿವಾರಣೆಯಾಗಿದೆ ಎಂದು ತನ್ನ ಬೆನ್ನನ್ನೇ ಚಪ್ಪರಿಸಿಕೊಳ್ಳುವವರಿಗೆ ಬಿಜೆಪಿ ಪ್ರತಿಭಟನೆ ಮಾಡುವವರಿಗೆ ಸಮಸ್ಯೆಯ ಅರಿವೇ ಆಗಿರಲಿಲ್ಲ. ಪ್ರತಿಭಟನೆ ಕರೆದ ಬಳಿಕ ಪ್ರೆಸ್ ಮೀಟ್ ಮಾಡಿದ್ದಾರೆ. ಆದರೂ ಸಮಸ್ಯೆ ನಿವಾರಣೆಯಾಗಿಲ್ಲ ಎಂದು ಆರೋಪಿಸಿದರು.

ಅವರು ಮುಂದುವರೆದು, “ಕಾಂಗ್ರೆಸ್ ನಾಯಕರು ಆರೋಗ್ಯ ವಿಮೆಗೆ ಜಿಎಸ್‌ಟಿ ವಿಧಿಸಲಾಗಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ಅವರ ಆಡಳಿತದಲ್ಲಿ ವ್ಯಾಟ್ 12.5% ಇತ್ತು. ಈಗ ಅದನ್ನು ಹೋಲಿಸಿದರೆ ತೆರಿಗೆ ಕಡಿಮೆ ಆಗಿದೆ. ಅಂಚೆ ಕಚೇರಿಗಳಲ್ಲಿ ಜೀವವಿಮೆ ಯೋಜನೆಗಳ ಸೌಲಭ್ಯವಿದೆ, ಆದರೆ ಜನರ ಹಿತಾಸಕ್ತಿಗಿಂತ ಪಕ್ಷದ ಲಾಭದತ್ತ ಕಾಂಗ್ರೆಸ್ ಮುಖಮಾಡಿದೆ,” ಎಂದು ಅರೋಪಿಸಿದರು.

“ಯುಪಿಎ ಆಡಳಿತಾವಧಿಯಲ್ಲಿ ನೇರ ಮತ್ತು ಪರೋಕ್ಷ ತೆರಿಗೆಗಳು ಜಿಎಸ್‌ಟಿಗಿಂತ ಹೆಚ್ಚಾಗಿದ್ದವು. ಈಗ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಿಗೆ ಶೂನ್ಯ ಅಥವಾ ಶೇ.4ರಷ್ಟು ಮಾತ್ರ ತೆರಿಗೆ ವಿಧಿಸಿದೆ. ಆದರೂ ಕಾಂಗ್ರೆಸ್ ನಾಯಕರಿಗೆ ಅದು ಗೋಚರಿಸುತ್ತಿಲ್ಲ. ಚಿನ್ನದ ದರ ಏರಿಕೆಯನ್ನೂ ಸರ್ಕಾರದ ಮೇಲೇ ಹೊರೆ ಹಾಕುತ್ತಾರೆ. ಆದರೆ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಆಧಾರಿತವಾಗಿದೆ. ಮೋದಿ ಸರ್ಕಾರ ಚಿನ್ನದ ಅಮದು ತೆರಿಗೆಯನ್ನು 15%ರಿಂದ 6%ಕ್ಕೆ ಇಳಿಸಿದೆ,” ಎಂದು ಹೇಳಿದರು.

“ಹಾಲಿನ ದರ 39 ರೂ.ನಿಂದ 50 ರೂ.ಗೆ ಏರಿಕೆಗೊಂಡಿದೆ. ಇಂಧನ, ವಿದ್ಯುತ್ ದರ, ಸ್ಮಾರ್ಟ್ ಮೀಟರ್ ಶುಲ್ಕ – ಇವುಗಳೆಲ್ಲ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳ ಫಲ, ಉದ್ಯೋಗಿಗಳ ಪಿಂಚಣಿಗಾಗಿ ವಿದ್ಯುತ್ ಗ್ರಾಹಕರಿಂದ ವಸೂಲಿ ನಡೆಸುತ್ತಿದ್ದಾರೆ. ರಾಜ್ಯದ ರಸ್ತೆಗಳ ಸ್ಥಿತಿ ಬಿಕ್ಕಟ್ಟಾಗಿದೆ, ಹೂಡಿಕೆದಾರರು ಇಲ್ಲಿನ ಮೂಲಸೌಕರ್ಯ ಕಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ,” ಎಂದು ಅರುಣ್ ಶೇಟ್ ತೀವ್ರ ಟೀಕೆ ಮಾಡಿದರು.

“ರಾಜ್ಯ ಸರ್ಕಾರ ಈಗ ಕೊರತೆ ಬಜೆಟ್‌ನ ಹಾದಿಯಲ್ಲಿದೆ. ಒಂದು ಕಾಲದಲ್ಲಿ ಸರ್ಸ್ಸನ್ ಬಜೆಟ್ ಮಂಡಿಸಿದ ಕರ್ನಾಟಕ ಈಗ ದಿವಾಳಿ ಹಂತ ತಲುಪಿದೆ. ರಾಜಧಾನಿ ಖರ್ಚು ತೀವ್ರವಾಗಿ ಕುಸಿದಿದೆ. ಸರ್ಕಾರದ ಬಳಿ ಧೈರ್ಯವಿದ್ದರೆ ಶ್ವೇತಪತ್ರ ಹೊರಡಿಸಲಿ,” ಎಂದು ಸವಾಲು ಹಾಕಿದರು.

“ಒಂದು ಕಾಲದಲ್ಲಿ ಪತ್ರಿಕೆಗಳಲ್ಲಿ ಅಭಿವೃದ್ಧಿಯ ಸುದ್ದಿಗಳೇ ತುಂಬಿಕೊಂಡಿದ್ದವು. ಆದರೆ ಇಂದಿನ ಕಾಂಗ್ರೆಸ್ ಆಡಳಿತದಲ್ಲಿ ಸಮಸ್ಯೆಗಳೇ ಸುದ್ದಿ ಆಗಿವೆ. ರಾಜ್ಯಕ್ಕೆ ಜಿಎಸ್‌ಟಿ ಮರುಪಾವತಿ ಆಗುತ್ತಿಲ್ಲ ಎಂಬ ಸುಳ್ಳು ಹೇಳಿಕೆ ನೀಡುವ ಹಣಕಾಸು ನಚಿವರಿಗೆ ಸಾಕ್ಷಿ ಕೇಳಿದಾಗ ಉತ್ತರ ಕೊಡಲು ಸಾಧ್ಯವಾಗುತ್ತಿಲ್ಲ” ಎಂದರು.

“135 ಸೀಟುಗಳ ಅಧಿಕಾರ ಹೊಂದಿರುವ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿಗಿಂತ ಅಧಿಕಾರದ ಕಸರತ್ತು, ಸಿಎಂ-ಡಿಸಿಎಂ ಬದಲಾವಣೆಗಳ ಕುರಿತ ಚರ್ಚೆಯಲ್ಲೇ ಕಾಲಹರಣ ಮಾಡುತ್ತಿದೆ. ಮನಪಾಗೆ ಅನುದಾನ ನೀಡದೆ ಅಭಿವೃದ್ಧಿ ತಡೆಗಟ್ಟುತ್ತಿದೆ,” ಎಂದು ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರರಾದ ಸತೀಶ್ ಪ್ರಭು, ಕದ್ರಿ ಮನೋಹರ ಶೆಟ್ಟಿ, ಕಾರ್ಯದರ್ಶಿ ರಮೇಶ್ ಹೆಗ್ಡೆ ಹಾಗೂ ಡೊಂಬಯ್ಯ ಅರಳ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments