ಜುಗಾರಿ ಅಡ್ಡೆಗೆ ದಾಳಿ; 14 ಮಂದಿ ಬಂಧನ – ರೂ. 13.41 ಲಕ್ಷ ಸೊತ್ತು ವಶ

Spread the love

ಜುಗಾರಿ ಅಡ್ಡೆಗೆ ದಾಳಿ; 14 ಮಂದಿ ಬಂಧನ – ರೂ. 13.41 ಲಕ್ಷ ಸೊತ್ತು ವಶ

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಜುಗಾರಿ ಅಡ್ಡೆಗೆ ಆದೇಶದಂತೆ ಪಿ. ಕೃಷ್ಣಕಾಂತ್ ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಕಳ ಉಪ ವಿಭಾಗದವರು ದಾಳಿ ನಡೆಸಿ 14 ಮಂದಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಕೃಷ್ಣ ಮಲ್ಪೆ (30), ರಾಜೇಶ್, (30) ಕಟಪಾಡಿ, ಮನೋಜ್, (29) ಕೊಡಂಕೂರು, ಜಗದೀಶ್ ಕುಂದರ್, (44) ಬಾಪುತೋಟ, ಕೊಡವೂರು, ಅಕ್ಷಯ್ ಈರಪ್ಪ ಕಟ್ಟಗಿ, (22) ನಿಟ್ಟೂರು, ಪುತ್ತೂರು ಗ್ರಾಮ, ಶ್ರೀನಿವಾಸ ಎ.(25) ನಿಟ್ಟೂರು, ಪುತ್ತೂರು ಗ್ರಾಮ, ನವೀನ್ ಕುಮಾರ್, (35) ಕಪ್ಪೆಟ್ಟು, ಅಂಬಲಪಾಡಿ ಗ್ರಾಮ ನಿಂಗಪ್ಪ ಚಲವಾದಿ, (24) ಉಡುಪಿ , ಮುಕ್ತುಂ ಹುಸೇನ್ ತಹಶೀಲ್ದಾರ, (35 ಇಂದ್ರಾಳಿ, ಸುಜಿತ್, (29) ಮಲ್ಪೆ, ಕೃಷ್ಣ, (25) ಬನ್ನಂಜೆ, ಶಂಕರ್ ಕೋಟ್ಯಾನ್, (38) ಪಡುಕೆರೆ, ಮಂಜುನಾಥ ಕೆ., (29) ಕೊಡಂಕೂರು,ಮಂಜುನಾಥ, (30) ಕಾರ್ನಾಡು, ಮೂಲ್ಕಿ ಎಂದು ಗುರುತಿಸಲಾಗಿದೆ.

ಮೇ 31 ರಂದು ಮೇಲಾಧಿಕಾರಿಯವರಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ಪೂಜಾ ಮಾರ್ಬಲ್ಸ್ ಹತ್ತಿರದ ಶ್ರೀನಿವಾಸ ಪೂಜಾರಿಯವರ ಮನೆಯ ಬಳಿಯ ಪಶ್ಚಿಮ ಬದಿಯಲ್ಲಿರುವ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆಂಬುದಾಗಿ 15:00 ಗಂಟೆಗೆ ಖಚಿತ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಯವರ ಆದೇಶದಂತೆ ಪಿ. ಕೃಷ್ಣಕಾಂತ್ ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಕಳ ಉಪ ವಿಭಾಗ ರವರು ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ 16:00 ಗಂಟೆಗೆ ದಾಳಿ ನಡೆಸಿ, ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಆರೋಪಿತರಿಂದ ಅಂದರ್- ಬಾಹರ್ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ನಗದು ಆರೋಪಿತರ ವಶದಲ್ಲಿದ್ದ ಒಟ್ಟು ನಗದು ರೂಪಾಯಿ 80,680/- ಹಾಗೂ ವಿವಿಧ ಕಂಪೆನಿಯ ಸುಮಾರು ರೂಪಾಯಿ. 20,500/- ಮೌಲ್ಯದ ಒಟ್ಟು 16 ಮೊಬೈಲ್ಗಳು, ಸುಮಾರು ರೂಪಾಯಿ. 11,00,000/- ಮೌಲ್ಯದ 2 ಕಾರುಗಳು, ಅಂದಾಜು 1,40, 000/- ರೂಪಾಯಿ ಮೌಲ್ಯದ ಒಟ್ಟು 05 ಮೋಟಾರ್ ಸೈಕಲ್ಗಳು, ಸುಮಾರು ರೂಪಾಯಿ. 250/- ಮೌಲ್ಯದ ನೀಲಿ ಮತ್ತು ಹಸಿರು ಬಣ್ಣದ 02 ಟರ್ಪಾಲ್ ಮತ್ತು ಇಸ್ಪೀಟು ಎಲೆಗಳು– 52 ಗಳನ್ನು ಮುಂದಿನ ವ್ಯವಹರಣೆಯ ಬಗ್ಗೆ, ಪಂಚರ ಸಮಕ್ಷಮ 16:15 ಗಂಟೆಯಿಂದ 18:45 ಗಂಟೆಯವರೆಗೆ ಮಹಜರು ಮುಖೇನಸ್ವಾಧೀನ ಪಡಿಸಿಕೊಂಡ ಎಲ್ಲಾ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ. 13,41430/- ಆಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love