ನಾಡಾ ಬಾಂಬ್ ಮಾರಾಟ ಜಾಲ ಪತ್ತೆ; ಮೂವರ ಬಂಧನ, 33 ನಾಡ ಬಾಂಬ್ ವಶ

Spread the love

ನಾಡಾ ಬಾಂಬ್ ಮಾರಾಟ ಜಾಲ ಪತ್ತೆ; ಮೂವರ ಬಂಧನ, 33 ನಾಡ ಬಾಂಬ್ ವಶ

ಉಡುಪಿ: ನಾಡ ಬಾಂಬ್ ತಯಾರಿ ಹಾಗೂ ಮಾರಾಟ ಜಾಲವನ್ನು ಹೆಬ್ರಿ ಪೋಲಿಸರು ಪತ್ತೆಹಚ್ಚಿದ್ದು ಮೂವರನ್ನು ಬಂಧಿಸಿ 33 ನಾಡ ಬಾಂಬ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಬಂಧಿತರನ್ನು ಶಂಕರನಾರಾಯಣ ನಿವಾಸಿ ಗುಣಕರ ಶೆಟ್ಟಿ (56), ಲಕ್ಷಣ ಶೆಟ್ಟಿ (67), ಹೆಬ್ರಿ ಕನ್ಯಾನದ ನಾಗೇಶ್ ನಾಯಕ್ (35) ಎಂದು ಗುರುತಿಸಲಾಗಿದೆ.

ನವೆಂಬರ್ 21 ರಂದು ಸಂಜೆ ಸಮಯ ಹೆಬ್ರಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ   ಜಗನ್ನಾಥ.ಟಿ.ಟಿ ರವರು ಇಲಾಖಾ ಜೀಪು ನಂಬ್ರ KA-20-G-334 ನೇದರಲ್ಲಿ ಠಾಣಾ ಸಿಬ್ಬಂದಿಗಳೊಡನೆ ಶಿವಪುರ ಗ್ರಾಮದಲ್ಲಿ ರೌಂಡ್ಸ್ನಲ್ಲಿದ್ದಾಗ ಖಚಿತ ಮಾಹಿತಿ ಮೇರೆಗೆ ಸಂಜೆ 5:00 ಗಂಟೆಗೆ ಶಿವಪುರ ಗ್ರಾಮದ ಬ್ಯಾಣ ಮುಖ್ಯ ರಸ್ತೆಯಲ್ಲಿ KA-20-EK-2695 ನೇ ನಂಬ್ರದ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನವನ್ನು ನಿಲ್ಲಿಸಿ ವಾಹನ ಸವಾರನನ್ನು ವಿಚಾರ ಮಾಡಿ ಆತನ ದ್ವಿಚಕ್ರ ವಾಹನವನ್ನು ಪರಿಶೀಲಿಸಿದಾಗ ಸೀಟಿನ ಕೆಳಭಾಗದ ಬಾಕ್ಸ್ ನಲ್ಲಿ 30 ನಾಡ ಬಾಂಬುಗಳು ಪತ್ತೆಯಾಗಿದ್ದು ಅದರ ಜೊತೆಗೆ ಒಂದು ತಲೆಗೆ ಕಟ್ಟುವ ಟಾರ್ಚರ್, ಒಂದು ಚೂರಿ ಹಾಗೂ ರೈನ್ ಕೋಟ್ ಸಿಕ್ಕಿದ್ದು, ಈ ಬಗ್ಗೆ ಹೆಚ್ಚಿನ ವಿಚಾರ ಮಾಡಲಾಗಿ ಸದ್ರಿ ನಾಡ ಬಾಂಬ್ನ್ನು ಕಾಡು ಪ್ರಾಣಿಗಳನ್ನು ಸಾಯಿಸಲು ಕಾಡಿನಲ್ಲಿ ಇಡಲು ಹೋಗುತ್ತಿರುವುದಾಗಿ ತಿಳಿಸಿರುತ್ತಾನೆ.

ನಾಡ ಬಾಂಬ್ಗಳನ್ನು   ಗುಣಕರ ಶೆಟ್ಟಿ   ಎಂಬುವವರ ಬಳಿ ಹಣವನ್ನು ಕೊಟ್ಟು ಖರೀದಿ ಮಾಡಿರುವುದಾಗಿ ತಿಳಿಸಿದ್ದು. ಈ ಬಗ್ಗೆ ಆರೋಪಿ ನಾಗೇಶ್ ನಾಯಕ್ ನನ್ನು ದಸ್ತಗಿರಿ ಮಾಡಿದ್ದು, ಮೋಟಾರ್ ಸೈಕಲ್ ಹಾಗೂ 30 ನಾಡ ಬಾಂಬುಗಳನ್ನು ಸ್ವಾಧೀನಪಡಿಸಿಕೊಂಡು ಮೇಲ್ಕಂಡಂತೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಕಾರ್ಕಳ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ   ಋಷಿಕೇಶ್ ಸೋನಾವಣೆ ರವರ ನಿರ್ದೇಶನದಂತೆ ಈ ದಿನ ನವೆಂಬರ್ 22 ರಂದು ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ  ಜಾಯ್ ಅಂತೋನಿ ಮತ್ತು ಹೆಬ್ರಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಜಗನ್ನಾಥ.ಟಿ.ಟಿ ಮತ್ತು ಸಿಬ್ಬಂದಿಯವರು ಆರೋಪಿ ನಾಗೇಶ್ ನಾಯಕ್ ಎಂಬವನಿಗೆ ನಾಡ ಬಾಂಬುಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದ್ದ  ಗುಣಕರ ಶೆಟ್ಟಿ , ಲಕ್ಷ್ಮಣ ಶೆಟ್ಟಿ @ ಲಚ್ಚು   ಎಂಬವರನ್ನು ದಸ್ತಗಿರಿ ಮಾಡಿ ಅವರಿಂದ ಒಂದು ಮೋಟಾರು ಸೈಕಲ್ ಹಾಗು 3 ನಾಡ ಬಾಂಬುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿರುತ್ತದೆ.  ಗುಣಕರ ಶೆಟ್ಟಿಯವರನ್ನು ವಿಚಾರಣೆಗೆ ಒಳಪಡಿಸಿದಾಗ ಆತನು ಒಂದು ನಾಡ ಬಾಂಬನ್ನು ರೂಪಾಯಿ 500/- ನಂತೆ 30 ನಾಡಾಬಾಂಬುಗಳನ್ನು 15,000 ರೂಪಾಯಿಗೆ ಆರೋಪಿಯಾದ ನಾಗೇಶ್ ನಾಯಕನಿಗೆ ಕೊಟ್ಟಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ.


Spread the love