ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಎನ್ ಕೌಂಟರ್ ಮಾಡಿ – ಶಾಸಕ ಸುನೀಲ್ ಕುಮಾರ್

Spread the love

ಪಾಕಿಸ್ತಾನ ಪರ ಘೋಷಣೆ ಕೂಗಿದರೆ ಎನ್ ಕೌಂಟರ್ ಮಾಡಿ – ಶಾಸಕ ಸುನೀಲ್ ಕುಮಾರ್

ಕಾರ್ಕಳ: ದೇಶವಿರೋಧಿ ಹಾಗು ಪಾಕಿಸ್ತಾನ ಪರ ಘೋಷಣೆ ಹೋಗಿದ್ದಲ್ಲಿ ಯಾವುದೇ ತನಿಖೆ ವಿಚಾರಣೆ ಮಾಡುವ  ಅಗತ್ಯ ಇಲ್ಲದೆ ನೇರವಾಗಿ ಅವರನ್ನು ಎನ್ಕೌಂಟರ್ ಮಾಡಬೇಕು ಎಂದು ಆಡಳಿತ ಪಕ್ಷದ ಸಚೇತಕ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಕಾರ್ಕಳ ಬಸ್ ನಿಲ್ದಾಣದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತದಲ್ಲಿ ಹುಟ್ಟಿ ಬೆಳೆದು ಇಲ್ಲಿಯ ಗಾಳಿ ನೀರು ಆಹಾರ ಜೊತೆಗೆ ಎಲ್ಲಾ ಸೌಲಭ್ಯ ಪಡೆದು ಪಾಕಿಸ್ತಾನದ ಪರ ಘೋಷಣೆ ಮಾಡುವವರಿಗೆ ಎನ್ಕೌಂಟರ್ ಮಾಡುವ ಮೂಲಕ ದೇಶ ವಿರೋಧಿಗಳಿಗೆ ಉತ್ತರ ನೀಡಬೇಕಾಗಿದೆ.

 ಇಂದು ದೇಶವಿರೋಧಿ ಕೆಲಸ ಮಾಡಿದ ಯುವತಿಯ ಮನೆ ಕಾರ್ಕಳದಿಂದ 70 ಕಿಲೋಮೀಟರ್ ದೂರದಲ್ಲಿದೆ ನಕ್ಸಲ್ ಚಟುವಟಿಕೆಗಳಿಗೆ ಶೃಂಗೇರಿ ಕೊಪ್ಪ ಕೇಂದ್ರಸ್ಥಾನವಾಗಿತ್ತು ಎಡಪಂಥೀಯ ಚಟುವಟಿಕೆ ಮತ್ತೆ ಜೀವ ತುಂಬುವ ಮೂಲಕ ಶೃಂಗೇರಿ ಕೊಪ್ಪ ಮೂಲದ ಯುವತಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದಾರೆ ಮಂಗಳೂರುಗಳಲ್ಲಿ ಕೇರಳ ರಾಜ್ಯದಿಂದ ಬಂದು ಗಲಾಟೆ ಮಾಡುತ್ತಾರೆ ದೇಶದ ಒಳಗೆ ಅಭದ್ರತೆ ನಿರ್ಮಾಣ ಮಾಡಿ ಈ ರೀತಿ   ಸಮಾಜದ್ರೋಹಿ ದೇಶದ್ರೋಹಿ ಘೋಷಣೆ ಕೂಗುವವರು  ಹಾಗೂ ಅವರ ಹಿಂದೆ ಅಡಗಿರುವ ಕಾಣದ ಶಕ್ತಿಗಳ ನಿಜ ಮುಖವಾಡ ಬಯಲಾಗಬೇಕಾಗಿದೆ ಎಂದರು ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದ ಆಯೋಜಕರ ಮೇಲೂ ಪ್ರಕರಣವನ್ನು ದಾಖಲಿಸುವಂತೆ ಗೃಹ ಇಲಾಖೆಯನ್ನು ಸುನೀಲ್ ಕುಮಾರ್ ಆಗ್ರಹಿಸಿದರು.

ಸಿಎಎ ಕಾಯ್ದೆ ವಿಚಾರದಲ್ಲಿ ಮುಸಲ್ಮಾನರಿಗೆ ತೊಂದರೆ ಇಲ್ಲವೆಂದು ಪದೇಪದೇ ಹೇಳುತ್ತಿದ್ದರು ಮುಸ್ಲಿಮರು ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ಅಗತ್ಯತೆ ಏನೀತ್ತು. ಸಿಎಎ  ಪ್ರತಿಭಟನೆ ಹಿಂದಿದ್ದ ಮುಖವಾಡಗಳು ಯಾವುದು ಮನಸ್ಸಿಲ್ಲದ ಮನಸ್ಸಿಂದ ರಾಷ್ಟ್ರಧ್ವಜ ಹಿಡಿದು ಮನದಲ್ಲಿ ಪಾಕಿಸ್ತಾನ ಜಪ ಮಾಡುವ ಮೂಲಕ ಇಂದು ಸಿಎಂ ವಿರುದ್ಧ ಪ್ರತಿಭಟನಾಕಾರರ ನಿಜವಾದ ಬಣ್ಣ ಬಯಲಾಗಿದೆ ಎಂದರು


Spread the love