ಪೊಲೀಸರ ಮೇಲೆ ಗೂಂಡಾ ವರ್ತನೆ ತೋರಿದ ಸಂಸದರ ಮೇಲೆ ಪ್ರಕರಣ ದಾಖಲಿಸಲು ಎಸ್ಡಿಪಿಐ ಆಗ್ರಹ

Spread the love

ಪೊಲೀಸರ ಮೇಲೆ ಗೂಂಡಾ ವರ್ತನೆ ತೋರಿದ ಸಂಸದರ ಮೇಲೆ  ಪ್ರಕರಣ ದಾಖಲಿಸಲು ಎಸ್ಡಿಪಿಐ ಆಗ್ರಹ

ಮಂಗಳೂರು:ಜಿಲ್ಲಾಡಳಿತದ ಅನುಮತಿ ಇಲ್ಲದೆಯೇ ಬಿಜೆಪಿ ಯುವ ಮೋರ್ಚಾ ಕಾನೂನನ್ನು ಗಾಳಿಗೆ ತೂರಿ ಮಂಗಳೂರು ಚಲೋ ಕಾರ್ಯಕ್ರಮ ನಡೆಸಿದಾಗ ಪೊಲೀಸ್ ಇಲಾಖೆ ಮೂಕ ಪ್ರೇಕ್ಷಕರಾಗಿ ನಿಂತು ಬೆಂಬಲಿಸಿದ್ದರೆಯೇ ಹೊರತು ಯಾವುದೇ ರೀತಿಯಲ್ಲಿ ಅನುಮತಿ ಇಲ್ಲದ ಕಾರ್ಯಕ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ.

ಜಿಲ್ಲೆಯಲ್ಲಿ ಮುಸ್ಲಿಂ ಸಂಘಟನೆಗಳು ಪೊಲೀಸ್ ಇಲಾಖೆ ಮಾಹಿತಿ ಕೊಟ್ಟು ಅಹ್ಮದ್ ಖುರೈಶಿಯ ಮೇಲೆ ದೌರ್ಜನ್ಯ ವೆಸಗಿದ ಸಿಸಿಬಿ ಪೊಲೀಸರ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡಿದಾಗ ಅನುಮತಿ ಇಲ್ಲ ಎಂಬ ನೆಪವೊಡ್ಡಿ ಅಮಾನವೀಯವಾಗಿ ಲಾಠಿ ಪ್ರಹಾರ ಮಾಡಿ ರಕ್ತ ಬರುವಂತೆ ಹೊಡೆದು ಸುಮಾರು ನೂರಕ್ಕಿಂತಲು ಹೆಚ್ಚು ಮಂದಿಯನ್ನು ಬಂಧಿಸಿ ಅವರ ಮೇಲೆ ಪ್ರಕರಣ ದಾಖಲಿಸಿ ಹಲವರನ್ನು ಜೈಲಿಗೆ ತಲ್ಲಿದ್ದಾರೆ. ಆದರೆ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ರಾಜ್ಯದ ಎಲ್ಲಾ ಕಡೆ ನಿಷೇಧ ಹೇರಿದರು ಇವತ್ತು ಮಂಗಳೂರಿನಲ್ಲಿ ಪೊಲೀಸರು ಕೆಲವರನ್ನು ಬಂಧಿಸಿ  ಬಿಡುಗಡೆಗೊಳಿಸಿದ್ದಲ್ಲದೇ ಬಿಜೆಪಿ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗದಂತೆ ಮೌನ ವಹಿಸಿದ್ದು ಪೊಲೀಸರ ತಾರತಮ್ಯ ನೀತಿಯನ್ನು ಎತ್ತಿ ತೋರಿಸುತ್ತದೆ.ಪೊಲೀಸ್ ವ್ಯವಸ್ಥೆಗೆ ಬೆಲೆ ಕೊಡದೆ ಬಿಜೆಪಿ ಅನುಮತಿ ಇಲ್ಲದೆ  ಕಾರ್ಯಕ್ರಮ ನಡೆಸುವಾಗ ತಡೆಯದೆ ಇಬ್ಭಾಗ ನೀತಿಯನ್ನು ತೋರಿಸಿ ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.ಇದರಿಂದ ಪೊಲೀಸರು ಹಿಂದುತ್ವ ಪರವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿರುತ್ತಾರೆ. ಅದೇ ರೀತಿ ಮಂಗಳೂರು ಚಲೋ ವನ್ನು ತಡೆಯವಲ್ಲಿ ಸರಕಾರದ ವೈಫಲ್ಯವು ಎದ್ದು ಕಾಣುತ್ತದೆ.  ಒಂದು ಕಡೆ ಯಡಿಯೂರಪ್ಪ ಪೊಲೀಸರು ಸಹಕರಿಸಿದ್ದಾರೆ ಎನ್ನುವಾಗ ಇನ್ನೊಂದು ಕಡೆ ಪೊಲೀಸರಿಗೆ ಗೂಂಡಾಗಿರಿಯ ಮೂಲಕ ಬೆದರಿಸುವ ಕೆಲಸವು ನಡೆಯಿತು ಇದರಿಂದ ಬಿಜೆಪಿಯು ಅಶಾಂತಿ ಸೃಷ್ಟಿಸಿ  ರಾಜಕೀಯ ಲಾಭಕ್ಕಾಗಿ ನಡೆಸಿದ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಬಿಜೆಪಿಯ ಕಾರ್ಯಕರ್ತರನ್ನು ಕದ್ರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾರುತಿ ನಾಯಕ್ ನೇತೃತ್ವದಲ್ಲಿ ಪೊಲೀಸರು ಬಂಧಿಸಿ ಕದ್ರಿ ಗೋರಕ್ಷನಾಥ ಮಂದಿರದಲ್ಲಿ ಇಟ್ಟಿದ್ದರು. ಬಂಧಿತರ ಮೇಲೆ ಕಾನೂನು ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಅವರ ಮೇಲೆ ಪ್ರಕರಣ ದಾಖಲಿಸಲು ಮುಂದಾದಾಗ ಅಲ್ಲಿಗೆ ಧಾವಿಸಿ ಬಂದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಲೀನ್ ಕುಮಾರ್ ಕಟೀಲ್ ಕಾರ್ಯಕರ್ತರ ಮತ್ತು ಪೊಲೀಸ್ ಸಿಬ್ಬಂದಿಗಳ ಮುಂದೆಯೇ ಇನ್ಸ್‌ಪೆಕ್ಟರ್ ರವರ ಮೇಲೆ ದರ್ಪದಿಂದ ಏಕವಚನದಲ್ಲಿ ಅವಮಾನಿಸಿ, ಗೂಂಡಾ ರೀತಿಯಲ್ಲಿ ವರ್ತಿಸಿ, ತಮ್ಮ ಹೆಸರಿನಲ್ಲಿ ಜಿಲ್ಲಾ ಬಂದ್ ಗೆ ಕರೆ ಕೊಡಲಾಗುವುದೆಂದು ಬೆದರಿಕೆ ಹಾಕಿ ದಬ್ಬಾಳಿಕೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದನ್ನು ಮರೆತು ಬಾಯಿಗೆ ಬಂದಂತೆ ಅವಮಾನಿಸಿ ಬಿಜೆಪಿಯ ನೈಜ ಸಂಸ್ಕೃತಿಯನ್ನು ಮತ್ತೆ ಜನತೆಗೆ ತೋರಿಸಿದ್ದಾರೆ. ಉತ್ತರ ಭಾರತದಲ್ಲಿ ಬಿಜೆಪಿ ನಾಯಕರು ಯಾವ ರೀತಿ ಅಲ್ಲಿಯ ಪೊಲೀಸರ ಮೇಲೆ ಗೂಂಡಾ ಪ್ರವರ್ತನೆಯನ್ನು ಮಾಡುತ್ತಾರೋ ಅದಕ್ಕಿಂತ ಕೀಲು ಮಟ್ಟದಲ್ಲಿ ದಬ್ಬಾಳಿಕೆಯನ್ನು ನಡೆಸಿ ಕರ್ನಾಟಕದ ಇಡೀ ಜನತೆಯೇ  ತಲೆ ತಗ್ಗಿಸುವಂತಾಗಿದೆ.ಈ ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ದ.ಕ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.

ಈ ರೀತಿಯಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಮೇಲೆ ಗೂಂಡಾ ಪ್ರವರ್ತನೆಯ ದಬ್ಬಾಳಿಕೆ ನಡೆಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಸಂಸದ ನಲೀನ್ ಕುಮಾರ್ ಕಟೀಲ್ ಮೇಲೆ ಪೊಲೀಸ್ ಇಲಾಖೆ ಕೂಡಲೇ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಹಾಗೂ ಅನುಮತಿ ಇಲ್ಲದೇ ಮಂಗಳೂರು ಚಲೋ ಕಾರ್ಯಕ್ರಮ ನಡೆಸಿದವರ ಮೇಲೆಯೂ ಅವಕಾಶ ಮಾಡಿಕೊಟ್ಟ ಪೊಲೀಸರ ಮೇಲೆಯೂ ಕ್ರಮ ಕೈಗೊಳ್ಳಬೇಕೆಂದು ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದ್ದಾರೆ.


Spread the love