ಫೋಟೋ ಕಳಿಸಿ ರಮ್ಯಾರಿಂದ 25 ಸಾವಿರ ರೂ. ಬಹುಮಾನ ಪಡೆಯಿರಿ!

Spread the love

ಫೋಟೋ ಕಳಿಸಿ ರಮ್ಯಾರಿಂದ 25 ಸಾವಿರ ರೂ. ಬಹುಮಾನ ಪಡೆಯಿರಿ!

ಬೆಂಗಳೂರು: ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಪ್ರಧಾನಿ ಮೋದಿ ಅವರು ಬಿಹಾರ, ಅಸ್ಸಾಂ, ಗುಜರಾತ್ ರಾಜ್ಯಗಳ ಪ್ರವಾಹದ ವೇಳೆ ಜನರೊಂದಿಗಿರುವ ಫೋಟೋ ಸೆಂಡ್ ಮಾಡಿ, ನನ್ನಿಂದ 25 ಸಾವಿರ ರೂ. ಬಹುಮಾನ ಪಡೆದುಕೊಳ್ಳಿರಿ ಎಂದು ಟ್ವೀಟ್ ಮಾಡುವ ಮೂಲಕ ಆಫರ್ ನೀಡಿದ್ದಾರೆ.

ಇದಕ್ಕೂ ಮೊದಲು ರಮ್ಯಾ ಅವರು ಪ್ರಧಾನಿಯಾಗಿರುವ ಮೋದಿಯವರು ಇದೂವರೆಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಹಾಗಾಗಿ ಅವರು ಭೇಟಿ ನೀಡಿರುವ ಫೋಟೋಗಳಿಲ್ಲಾ ಎಂದು ವ್ಯಂಗ್ಯ ಮಾಡಿದ್ದರು. ಈ ಟ್ವೀಟ್ಗೆ ಸಾಕಷ್ಟು ಪರ-ವಿರೋಧಗಳು ಸಹ ವ್ಯಕ್ತವಾಗಿದ್ದವು. ಈ ಟ್ವೀಟ್ಗೆ ವಿರೋಧ ವ್ಯಕ್ತಪಡಿಸಿದವರಿಗೆ ಮೋದಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿರುವ ಫೋಟೋ ಕಳುಹಿಸಿ ನನ್ನಿಂದ 25 ಸಾವಿರ ರೂ. ಬಹುಮಾನ ಪಡೆದುಕೊಳ್ಳಿ ಎಂದು ಖಾರವಾಗಿ ಉತ್ತರಿಸಿದ್ದಾರೆ.

ರಮ್ಯಾ ಆಫರ್ ನೋಡಿದ ಕೆಲವರು 2006ರಲ್ಲಿ ಮೋದಿ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿರುವ ಫೋಟೋ ಕಳುಹಿಸಿದ್ದರೆ, ಇನ್ನೂ ಕೆಲವರು ಗ್ರಾಫಿಕ್ ಫೋಟೋಗಳನ್ನು ಕಳುಹಿಸಿದ್ದಾರೆ.

ರಮ್ಯಾ ಅವರು ಆಗಸ್ಟ್ 5 ರಂದು ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ ಅವರ ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಈ ಫೋಟೋದಲ್ಲಿ ರಾಹುಲ್ ಗಾಂಧಿ ಜನರ ಜೊತೆ ಮಾತನಾಡುತ್ತಿರುವ ಫೋಟೋಗೆ `ಜನರ ನಾಯಕ’ ಎಂಬುದಾಗಿ, ಮೋದಿ ಅವರು ಗುಜರಾತ್ ನೆರಯ ವೈಮಾನಿಕ ಸಮೀಕ್ಷೆಯನ್ನು ವೀಕ್ಷಿಸುತ್ತಿರುವ ಫೋಟೋಗೆ `ಸೀಟ್ ಬೆಲ್ಟ್ ಲೀಡರ್’ ಎನ್ನುವ ತಲೆ ಬರಹವನ್ನು ಹಾಕಿ ಪ್ರಕಟಿಸಿದ್ದರು.


Spread the love

1 Comment

  1. WHAT A STRATEGY ! WHY ALL THE POLITICAL PARTIES ARE BLAMES ONES FAILURE WHY THEY CANT FOCUS THEIR OWN ACHIEVEMENTS ON THE COUNTRY’S DEVELOPMENT AND TO BOOST IN FRONT OF THE VOTERS !!

Comments are closed.