ಬಂಟ್ವಾಳ ಅಕ್ರಮ ಮರಳು ಅಡ್ಡೆ ದಾಳಿ; 60 ಲಕ್ಷ ಮೊತ್ತದ ಸೊತ್ತು ವಶ

Spread the love

ಬಂಟ್ವಾಳ ಅಕ್ರಮ ಮರಳು ಅಡ್ಡೆ ದಾಳಿ; 60 ಲಕ್ಷ ಮೊತ್ತದ ಸೊತ್ತು ವಶ

ಮಂಗಳೂರು: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಡಗ ಬೆಳ್ಳುರು ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಧಾಳಿ ನಡೆಸಿ ಲಕ್ಷಾಂತರ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಡಗ ಬೆಳ್ಳುರು ಎಂಬಲ್ಲಿ ಫಲ್ಗುಣಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯ ಮೆರೆಗೆ ಎಸ್ .ಪಿ ದಕ್ಷಿಣ ಕನ್ನಡರವರ ಮಾರ್ಗದರ್ಶನ ದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಬಡಗ ಬೆಳ್ಳುರು ಫಲ್ಗುಣಿ ನದಿ ದಡಕ್ಕೆ ತಲುಪಿದಾಗ ನದಿಯಲ್ಲಿ ನಾಡ ಬೋಟ್ ಗಳನ್ನು ಬಳಸಿ ಮರಳನ್ನು ತೆಗೆಯುತ್ತಿದ್ದಾಗ ಸ್ಥಳಕ್ಕೆತೆರಳಿದಾಗ ಪೋಲಿಸರನ್ನು ಕಂಡು ಮರಳನ್ನು ತೆಗೆಯುತ್ತಿದ್ದವರು ಓಡಿ ಹೋಗಿದ್ದು ವಿಷಯವನ್ನು ಕಂದಾಯ ಮತ್ತು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಯವರಿಗೆ ತಿಳಿಸಿ ಅಲ್ಲಿ ಇದ್ದಂತಹ ಒಂದು ಬೋಟ್ ಅನ್ನು ವಶಕ್ಕೆ ಪಡೆದಿದ್ದಾರೆ ನಂತರ ನದಿಯ ಆಚೆಯ ದಡದಲ್ಲಿ ಸುಮಾರು ಬೊಟ್ ಗಳು ಇದ್ದು ಕಂದಾಯ ಮತ್ತು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳೊಂದಿಗೆ ತೆರಳಿ ಪರಿಶಿಲಿಸಿದಾಗ 15 ನಾಡಬೊಟಿನಲ್ಲಿ ಮರಳು ತುಂಬಿದ್ದು ಮತ್ತು 33 ಬೊಟ್ ಗಳಲ್ಲಿ ಭಾಗಶಹ ಮರಳು ತುಂಬಿದ್ದ ಒಟ್ಟು 48 ಬೊಟ್ ಗಳನ್ನು. ವಶಕ್ಕೆ ಪಡೆದಿರುತ್ತಾರೆ.

ಈ ಪ್ರದೆಶವು ಬಜ್ಪೆ ಪೊಲೀಸ್ ಠಾಣ ವ್ಯಾಪ್ತಿಯಾಗಿರುತ್ತದೆ ವಶಪಡಿಸಿ ಕೊಂಡ ಒಟ್ಟು ಸ್ವತ್ತುಗಳ ಮೌಲ್ಯ ಸುಮಾರು 60 ಲಕ್ಷ ಎಂದು ಜಿಯಾಲಜಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ ದಾಳಿಯ ನೇತೃತ್ವ ವನ್ನು ಸಬ್ ಇನ್ ಸ್ಪೆಕ್ಟರ್ ಆಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ತರಬೇತಿ ಪಡೆಯುತ್ತಿರುವ ಅಕ್ಷಯ್ ಹಾಕೆ IPS ಪ್ರೊಬೆಷನರಿ ಆಫಿಸರ್,ಪ್ರಸನ್ನ ಪೊಲೀಸ್ ಸಬ್ ಇನ್ ಸ್ಪೆಕ್ಟರ್,ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿಯವರಾದ ಪಿಸಿ ಬಸವರಾಜ್,ಎ.ಹೆಚ್.ಸಿ ಕಿರಣ್ ಪಾಲ್ಗೊಂಡಿದ್ದರು


Spread the love