ಮಂಗಳೂರು: ಪಾವೂರು ಮೂಲದ ಅಮೀರ್ ಮಲಾರ್ ನಾಪತ್ತೆ
ಮಂಗಳೂರು: ಪಾವೂರು ಗ್ರಾಮದ ನಿವಾಸಿ ಅಮೀರ್ ಮಲಾರ್ (46) ಎಂಬವರು ಕಳೆದ ಎರಡು ವರ್ಷಗಳಿಂದ ಕಾಣೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಪೊಲೀಸರು ಸಾರ್ವಜನಿಕರಿಂದ ಮಾಹಿತಿ ಕೋರಿದ್ದಾರೆ.
ಪೊಲೀಸರ ಪ್ರಕಾರ, ಅಮೀರ್ ಮಲಾರ್ ಅವರು 2022ರ ಜೂನ್ 11ರಂದು ಬೆಂಗಳೂರು ಪ್ರದೇಶದಲ್ಲಿ ಕಾಣೆಯಾಗಿದ್ದಾರೆ. ಅವರ ಎತ್ತರ 5 ಅಡಿ 9 ಇಂಚು, ಮಾತನಾಡುವ ಭಾಷೆಗಳು ತುಳು, ಕನ್ನಡ ಮತ್ತು ಬ್ಯಾರಿ ಎಂದು ತಿಳಿಸಲಾಗಿದೆ.
ಅವರು ಕಾಣೆಯಾದ ಬಳಿಕ ಮನೆಗೆ ಮರಳದೇ ಇದ್ದ ಕಾರಣ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಖಾಯಂ ವಿಳಾಸ ಪಾವೂರು ಗ್ರಾಮ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೀರ್ ಮಲಾರ್ ಅವರ ಕುರಿತಾಗಿ ಯಾವುದೇ ರೀತಿಯ ಮಾಹಿತಿ ಯಾರಿಗಾದರೂ ತಿಳಿದಿದ್ದರೆ ತಕ್ಷಣ ಕೊಣಾಜೆ ಪೊಲೀಸ್ ಠಾಣೆ (ಮಂಗಳೂರು ನಗರ)ಗೆ ಮಾಹಿತಿ ನೀಡುವಂತೆ ಪೊಲೀಸರು ವಿನಂತಿಸಿದ್ದಾರೆ.
ಸಂಪರ್ಕ ಸಂಖ್ಯೆ: 0824-2220536 / 9019873901 / 9480802351