ಮಂಗಳೂರು: ಬಿಜೆಪಿ ಕಪ್ಪು ಹಣ ಹೊಂದಿದವರನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದೆ : ಶಾಸಕ ಮೋಯ್ದಿನ್ ಬಾವಾ

Spread the love

ಮಂಗಳೂರು: ಭಾರತೀಯ ಜನತಾ ಪಕ್ಷ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಹೊಂದಿದವರನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದೆ ಎಂದು ಶಾಸಕ ಮೋಯ್ದಿನ್ ಬಾವಾ ಆರೋಪಸಿದ್ದಾರೆ.

congress_protest-001 congress_protest-003

ಅವರು ಮಂಗಳವಾರ ಲಾಲ್ ಬಾಗ್ ಗಾಂಧಿ ಪ್ರತಿಮೆ ಎದುರು ಜಿಲ್ಲಾ ಯೂತ್ ಕಾಂಗ್ರೆಸ್ ಆಯೋಜಿಸಿ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರದಲ್ಲಿ ಬಿಜೆಪಿ ಪಕ್ಷ ಜನರನ್ನು ಕಪ್ಪು ಹಣ ತರುವುದಾಗಿ ಹೇಳಿ ಮರಳು ಮಾಡಿ ಆದಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ಬಳಿಕ ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ಜಮೆ ಮಾಡಿಸುವುದಾಗಿ ಜನರನ್ನು ನಂಬಿಸುತ್ತಾ ಬಂತು ಆದರೆ ಅಧಿಕಾರಕ್ಕೆ ಬಂದ ಬಳಿಕ ಮೋದಿ ಸರಕಾರ ತನ್ನ ಭರವಸೆಯನ್ನು ಮರೆತಿದೆ. ಮೋದಿ ಇಡೀ ಭಾರತೀಯರನ್ನು ಮೋಸ ಮಾಡುತ್ತಿದ್ದೆ. ಚುನಾವಣಾ ಸಮಯದಲ್ಲಿ ಕಾರ್ಪೊರೇಟ್ ವ್ಯಕ್ತಿಗಳು ಆರ್ಥಿಕವಾಗಿ ಮೋದಿಗೆ ಬೆಂಬಲವಾಗಿ ನಿಂತಿದ್ದು, ಅದಕ್ಕೆ ಪ್ರತಿಯಾಗಿ ಮೋದಿ ಭೂಮಸೂದೆ ಕಾನೂನನ್ನು ಜಾರಿಗೆ ತಂದು ಕಾರ್ಪೋರೇಟ್ ವ್ಯಕ್ತಿಗಳನ್ನು ಮೆಚ್ಚಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಕೇಂದ್ರ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಲಲಿತ್ ಮೋದಿಗೆ ಮಾನವೀಯತೆಯ ದೃಷ್ಟಿಯಿಂದ ವೀಸಾ ವಿಚಾರದಲ್ಲಿ ಸಹಾಯ ಮಾಡಿದರು. ಲಲಿತ್ ಮೋದಿ ಕಪ್ಪು ಹಣ ವ್ಯವಹಾರವನ್ನು ಹೊಂದಿರುವ ಪ್ರಮುಖ ವ್ಯಕ್ತಿಯಾಗಿದ್ದು ಆತನನ್ನು ರಕ್ಷಿಸುವ ಕೆಲಸವನ್ನು ಸುಷ್ಮಾ ಮಾಡಿದ್ದಾರೆ. ಆದ್ದರಿಂದ ಅವರು ತಮ್ಮ ಮಂತ್ರಿ ಪದವಿಗೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಸುರೇಶ್ ಬಲ್ಲಾಳ್, ಮಿಥುನ್ ರೈ, ಪ್ರವೀಣ್ ಚಂದ್ರ ಆಳ್ವ, ಮೆರೀಲ್ ರೇಗೊ, ಅಶೋಕ್ ಡಿ ಕೆ, ಅರುಣ್ ಕುವೆಲ್ಲೊ, ನವೀನ್ ಡಿ’ಸೋಜಾ ಇನ್ನಿತರರು ಉಪಸ್ಥಿತರಿದ್ದರು.


Spread the love