ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಯೂತ್ ಕಾಂಗ್ರೆಸ್ ವಿರುದ್ದ ಕೆಟ್ಟ ಭಾಷೆಯ ಬಳಕೆ ; ಕ್ರಮ ಜರುಗಿಸುವಂತೆ ಪೋಲಿಸ್ ಕಮೀಷನರ್ ಅವರಿಗೆ ದೂರು

Spread the love

ಮಂಗಳೂರು : ಸಾಮಾಜಿಕ ಜಾಲ ತಾಣಗಳಲ್ಲಿ ಯೂತ್ ಕಾಂಗ್ರೆಸ್ ವಿರುದ್ದ ಕೆಟ್ಟ ಭಾಷೆಯನ್ನು ಬಳಿಸಿದ ಬ್ಲಾಗಿನ ವ್ಯಕ್ತಿಯನ್ನು ಬಂಧಿಸುವಂತೆ ಹಾಗೂ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ದ ಅನಾವಶ್ಯಕವಾಗಿ ಪ್ರಕರಣ ದಾಖಲಿಸಿರುವ ವಿರುದ್ದ ಜಿಲ್ಲಾ ಯೂತ್ ಕಾಂಗ್ರೆಸ್ ನಗರ ಪೋಲಿಸ್ ಕಮೀಶನರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.

08-congress-protest-20150814-007 09-congress-protest-20150814-008 06-congress-protest-20150814-005

ಈ ವೇಳೆ ಮಾತನಾಡಿದ ಯೂತ್ ಕಾಂಗ್ರೆಸ್ ನಾಯಕ ಪ್ರವೀಣ್ ಚಂದ್ರ ಆಳ್ವಾ ಅಗೋಸ್ತ್ 12 ರಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ವಿರುದ್ದ ಕೆಟ್ಟ ಭಾಷೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವುದು ಖಂಡನೀಯ. ಮಿಥುನ್ ರೈ ಸಾಮಾಜಿಕ ಕಳಕಳಿಯನ್ನು ಹೊಂದಿದ ವ್ಯಕ್ತಿಯಾಗಿದ್ದು, ಹಲವಾರು ರೀತಿಯ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ರೈ ಅವರ ಏಳಿಗೆಯನ್ನು ಸಹಿಸದ ವ್ಯಕ್ತಿಗಳು ಅವರ ಹೆಸರನ್ನು ಹಾಳುಗೆಡಹಲು ಹೊರಟಿದ್ದಾರೆ ಎಂದರು.

ಅಗೋಸ್ತ್ 9 ರಂದು ಅಸೈಗೋಳಿಯಲ್ಲಿ ಯೂತ್ ಕಾಂಗ್ರೆಸ್ ತನ್ನ ಸ್ಥಾಪನಾ ದಿನವನ್ನು ಆಚರಿಸಿದ್ದು, ಈ ವೇಳೆ ಧ್ವಜಾರೋಹಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕುರಿತಾಗಿ ನಗರದ ಸಾಮಾಜಿಕ ತಾಣವೊಂದರಲ್ಲಿ  ಯೂತ್ ಕಾಂಗ್ರೆಸ್ ಹಾಗೂ ಮಿಥುನ್ ರೈ ವಿರುದ್ದ ಕೆಟ್ಟದಾಗಿ ಪ್ರಕಟಿಸಲಾಗಿತ್ತು. ಇಂತಹ ಕೆಟ್ಟ ಭಾಷೆಗಳನ್ನು ಬಳಸಿರುವುದು  ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೆಲಸ ಮಾಡುತ್ತದೆ. ಯೂತ್ ಕಾಂಗ್ರೆಸ್ ಯಾವೊತ್ತೂ ರಾಷ್ಟ್ರ ಧ್ವಜಕ್ಕೆ ಅವಮಾನಗೊಳಿಸುವ ಕೆಲಸವನ್ನು ಮಾಡಿಲ್ಲ. ನಾವು ರಾಷ್ಟ್ರ ಧ್ವಜವನ್ನು ಹಾರಿಸುವ ಧ್ವಜಕಂಬದಲ್ಲಿ ಯೂತ್ ಕಾಂಗ್ರೆಸ್ ಧ್ವಜ ಹಾರಿಸಿರುವುದು ತಪ್ಪು ಎಂದು ನಮಗೆ ತಿಳಿದ ಕೂಡಲೆ ಸಂಬಂಧಿತ ಅಧಿಕಾರಿಗಳಲ್ಲಿ ಈ ಕುರಿತು ಕ್ಷಮೆಯನ್ನು ಕೂಡ ಕೇಳಲಾಗಿದೆ. ಆದರೂ ಕೂಡ ಸಮಾಜದದಲ್ಲಿ ಗಣ್ಯವ್ಯಕ್ತಿಯಾಗಿರುವ ಮಿಥುನ್ ರೈ ಅವರ ಹೆಸರನ್ನು ಕೆಡಿಸುವ ಕೆಲಸವನ್ನು ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ನಡೆಸುತ್ತಿದ್ದು ಅಂತಹವರ ವಿರುದ್ದ ಸೈಬರ್ ಕಾನೂನಿನ ಅಡಿ ಕ್ರಮ ಕೈಗೊಳ್ಳಬೇಕು ಅಲ್ಲದೆ ಇದಕ್ಕೆ ಕಾರಣರಾಗ ಬ್ಲಾಗಿನ ಪ್ರಮುಖ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳಬೇಕು ಇದಕ್ಕೆ ತಪ್ಪಿದ್ದಲ್ಲಿ ಮುಂದಿನ ದಿನಗಳಲ್ಲಿ ಯೂತ್ ಕಾಂಗ್ರೆಸ್ ಉಗ್ರವಾದ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.

ಘಟನೆಯ ಕುರಿತು ಮ್ಯಾಂಗಲೋರಿಯನ್ ಪ್ರತಿನಿಧಿಯೊಂದಿಗೆ ಮಾತನಾಡಿದ ವಕೀಲ ವಿನಯ್ ರಾಜ್ ಅವರು ವ್ಯಕ್ತಿಯ ವಿರುದ್ದ ಸಾಮಾಜಿಕ ಜಾಲ ತಾಣಗಳಲ್ಲಿ ಕೆಟ್ಟದಾಗಿ ಬರೆಯುವುದು ಅಪರಾಧ. ಈ ಕುರಿತಾಗಿ ನಾವು ಕಮಿಷನರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣದ ವ್ಯಕ್ತಿಯ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮನವಿ ಸಲ್ಲಿಸಲಾಗಿದೆ. ಯೂತ್ ಕಾಂಗ್ರೆಸ್ ವತಿಯಿಂದ ಕೂಡ ಸಾಮಾಜಿಕ ಜಾಲತಾಣದ ವಿರುದ್ದ ಮಾಹಿತಿ ಹಕ್ಕು ಕಾಯಿದೆ ಅನ್ವಯ ದೂರು ನೀಡಲಾಗಿದ್ದು ಅದರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೋಲಿಸ್ ಕಮೀಷನರ್ ಭರವಸೆ ನೀಡಿದ್ದಾರೆ.

ಮಿಥುನ್ ರೈ ವಿರುದ್ದ ಕೋಣಾಜೆ ಪೋಲಿಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಯಾವುದೇ ಧ್ವಜವನ್ನು ರಾಷ್ಟ್ರೀಯ ಧ್ವಜಕ್ಕಿಂತಲೂ ಮೇಲ್ಪಟ್ಟದಲ್ಲಿ ಹಾರಿಸಿದ್ದಲ್ಲಿ ಅದು ಕ್ರಿಮಿನಲ್ ಪ್ರಕರಣವಾಗಲಿದೆ ಆದರೆ ಅಂತಹ ಘಟನೆ ಇಲ್ಲಿ ನಡೆಯದೆ ಇರುವುದರಿಂದ ದಾಖಲಾಗಿರುವ ಪ್ರಕರಣಕ್ಕೆ ಯಾವುದೇ ಮಹತ್ವ ನೀಡಬೇಕಾಗಿಲ್ಲ ಎಂದರು.


Spread the love