ಮಂಗಳೂರು: ಹಸಿವು ಮುಕ್ತ ರಾಜ್ಯ ಸಿದ್ದರಾಮಯ್ಯ ಕನಸು: ರಮಾನಾಥ್ ರೈ

Spread the love

ಮಂಗಳೂರು: ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸುವುದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹೇಳಿದರು.

ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ,  ರಾಜ್ಯ ಸರಕಾರ ಬಡವರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಬಿಜೆಪಿ ನಾಯಕರು ರಾಜ್ಯ ಸರಕಾರದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಸರಕಾರ 9/11 ಸಮಸ್ಯೆಯನ್ನು ತಂದಿಟ್ಟಿದ್ದು, ನಮ್ಮ ಸರಕಾರ ಬಂದ ಮೇಲೆ 9/11 ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದೇವೆ.

ramanath_rai_press_meet_ramanath_rai_press_meet_-001

ರಾಜೀವ್ ಗಾಂಧಿಯವರು ಪಂಚಾಯತ್ ರಾಜ್ ವ್ಯವಸ್ಥೆಗೆ ಅವಕಾಶ ಕೊಟ್ಟಿದ್ದು, ಪಂಚಾಯತ್ ಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕೆನ್ನುವುದು ಕಾಂಗ್ರೆಸ್ ಸರಕಾರದ ಅಪೇಕ್ಷೆ. ಅದಕ್ಕಾಗಿ ಪಂಚಾಯತ್ ರಾಜ್ ವಿಧೇಯಕಕ್ಕೆ ತಿದ್ದುಪಡಿ ಮಾಡಲು ಉದ್ದಶೀಸಿದ್ದು ಅದನ್ನು ಬಿಜೆಪಿ ವಿರೋಧಿಸಿದ್ದು ಆದರೂ ಕಾಂಗ್ರೆಸ್ ಸರಕಾರ ತಿದ್ದುಪಡಿ ತರಲು ಯಶಸ್ವಿಯಾಗಿದ್ದೇವೆ ಎಂದರು.

ಬಿಜೆಪಿ ಪಕ್ಷದವರು ಅಹಿಂದ ಕಾರ್ಯಕ್ರಮಗಳನ್ನು ಟೀಕಿಸುತ್ತಿದ್ದು, ಸಮಾಜದ ಕೆಳವರ್ಗದ ಜನತೆಗೆ ನ್ಯಾಯ ಒದಗಿಸುವುದರಲ್ಲಿ ತಪ್ಪಿಲ್ಲ. ಸಿದ್ದರಾಮಯ್ಯ ರಾಜ್ಯವನ್ನು ಹಸಿವು ಮುಕ್ತವನ್ನಾಗಿಸುವ ಕನಸು ಕಂಡಿದ್ದಾರೆ ಅವರು ಎಲ್ಲಾ ಸಮಯದಲ್ಲೂ ಬಡವರ ಮತ್ತು ಕೆಳವರ್ಗದವರ ಏಳಿಗೆಗೆ ಶ್ರಮಿಸುತ್ತಿದ್ದು ಅವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ಯ ಸರಕಾರ ಬಡವರಿಗೆ 3 ಲಕ್ಷದ ವರೆಗೆ 0% ಬಡ್ಡಿದರದಲ್ಲಿ ಮತ್ತು 10 ಲಕ್ಷದ ವರೆಗೆ 3% ಬಡ್ಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಾಲವನ್ನು ನೀಡುತ್ತಿದ್ದು, ಕಾಂಗ್ರೆಸ್ ಪಕ್ಷ ಸೂಟ್ ಬೂಟ್ ಸರಕಾರವಲ್ಲ ಬದಲಾಗಿ ಬಡವರ ಮತ್ತು ಹಿಂದುಳಿದವರ ಪರವಾದ ಸರಕಾರ ಎಂದರು. ಸರಕಾರದ ಅಭಿವೃದ್ಧಿ ಕೆಲಸಗಳ ಪರಿಣಾಮ ಮುಂದಿನ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಜಯಭೇರಿ ಗಳಿಸಲಿದೆ , ಎಂದರು.

ಶಾಸಕ ಮೊಯ್ದಿನ್ ಬಾವಾ, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮೇಯರ್ ಜಸಿಂತಾ ಆಲ್ಫ್ರೇಡ್, ಉಪಮೇಯರ್ ಪುರುಷೋತ್ತಮ್, ಶಶಿಧರ್ ಹೆಗ್ಡೆ, ಅಶೋಕ್ ಡಿ ಇನ್ನಿತರರು ಉಪಸ್ಥಿತರಿದ್ದರು.

 


Spread the love