‘ಮಡಕೆ ಗೊಬ್ಬರ’ ದ ಪ್ರಾತ್ಯಕ್ಷಿಕೆ  

Spread the love

‘ಮಡಕೆ ಗೊಬ್ಬರ’ ದ ಪ್ರಾತ್ಯಕ್ಷಿಕೆ  

ಮಂಗಳೂರು : ಡಿಸೆಂಬರ್ 28 ರಂದು ಅಪರಾಹ್ನ 4 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಶ್ರೀ ರಾಮಕೃಷ್ಣ ಮಿಷನ್ ಮಂಗಳೂರು ಇವರ ಸ್ವಚ್ಛತಾ ಸಂಪರ್ಕ ಅಭಿಯಾನದ ಜಾಗೃತಿಯ ಕಾರ್ಯಕ್ರಮದ ಭಾಗವಾಗಿ ಜಿಲ್ಲಾ ಪಂಚಾಯತಿನ ಎಲ್ಲಾ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸ್ವಚ್ಛತೆಯ ಕುರಿತು ಮಾಹಿತಿ ಹಾಗೂ ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಸುಲಭವಾಗಿ ನಿರ್ವಹಿಸುವಂತೆ ಮಾಡಲು `ಮಡಕೆ ಗೊಬ್ಬರ’ ದ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‍ನ ಉಪಕಾರ್ಯದರ್ಶಿ/ಎಸ್.ಬಿ.ಎಂ ನೋಡಲ್ ಅಧಿಕಾರಿ ಎಂ.ವಿ. ನಾಯಕ್, ಯೋಜನಾ ನಿರ್ದೇಶಕರಾದ ಓ.ಎಸ್. ಲೋಕೇಶ್, ರಾಮಕೃಷ್ಣ ಮಠ, ಮಂಗಳೂರು ಇದರ ಸ್ವಾಮಿ ಏಕಗಮ್ಯಾನಂದ ಜಿ, ಹಾಗೂ ಸ್ವಚ್ಛ ಮಂಗಳೂರು ಅಭಿಯಾನ ಸಂಯೋಜಕರಾದ ಉಮಾನಾಥ್ ಕೊಟೇಕಾರ್, ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎನ್ ಗಣಪತಿ ಭಟ್, ಸ್ವಚ್ಛ ಭಾರತ ಮಿಷನ್ ಜಿಲ್ಲಾ ಸಂಯೋಜಕರಾದ ಮಂಜುಳಾ ಜಿ, ಮಾನವ ಸಂಪನ್ಮೂಲ ಅಭಿವೃದ್ಧಿ ಜಿಲ್ಲಾ ಸಮಾಲೋಚಕರಾದ ನವೀನ್ ಉಪಸ್ಥಿತರಿದ್ದರು.


Spread the love