ಮಸ್ಕತ್ ಡಿಕೆಯಸಿ ವತಿಯಿಂದ ಎಜುಕೇಶನ್ ಮೀಟ್ 2017

Spread the love

ಮಸ್ಕತ್ ಡಿಕೆಯಸಿ ವತಿಯಿಂದ ಎಜುಕೇಶನ್ ಮೀಟ್ 2017

ಮಸ್ಕತ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ – ಮಂಗಳೂರು ಇದರ ಅಧೀನದಲ್ಲಿರುವ ಅಲ್ ಇಹಸಾನ್ ಎಜುಕೇಶನ್ ಸೆಂಟರ್, ಇದರ ವತಿಯಿಂದ ಒಮಾನ್ ನಲ್ಲಿ ಎಜುಕೇಶನ್ ಮೀಟ್ 2017 ಮಾರ್ಚ್ 17 ಶುಕ್ರವಾರ ರಾತ್ರಿ ಮಸ್ಕತ್ ನ ವಾದಿ ಕಬೀರ್ ನಲ್ಲಿರುವ ಕ್ರಿಸ್ಟಲ್ ಸುಯಿಟ್ಸ್ ಹೋಟೆಲ್ ಸಭಾಂಗಣದಲ್ಲಿ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮವು ಜನಾಬ್ ಅಲ್ ಹಾಜ್ ಅಸ್ಸಯಿದ್ ಆಟಕೋಯ ತಂಗಳ್ (ಅಧ್ಯಕ್ಷರು ಡಿಕೆಯಸಿ) ರವರ ದುವಾದೊಂದಿಗೆ ಆರಂಭವಾಯಿತು.

ಕಾರ್ಯಕ್ರಮವನ್ನು ರಾಜ್ಯ ಸಭಾ ಸದಸ್ಯ ಹಾಗು ಮಾಜಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರಾದ ಜನಾಬ್ ಕೆ ಆರ್ ರಹಮಾನ್ ಸಾಹೇಬ್ ರವರು ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವರು ಶಿಕ್ಷಣದ ಮಹತ್ವವನ್ನು ಮನವರಿಕೆ ಮಾಡಿದರು. ಶಿಕ್ಷಣದಿಂದಲೇ ಯಾವುದೇ ಜನಾಂಗ ಎಲ್ಲಾ ರಂಗದಲ್ಲಿ ಮುಂದೆ ಬರಲು ಮಾತ್ರ ಸಾಧ್ಯ ಎಂಬ ಮಂತ್ರವನ್ನು ನೆರೆದಿರುವ ಸಭಿಕರ ಮುಂದೆ ಹಂಚಿದರು. ಸಚಿವರು ಅಲ್ ಇಹಸಾನ್ ಎಜುಕೇಶನ್ ಸೆಂಟರ್ ಮೂಳೂರ್ ಭೇಟಿ ನೀಡಿದ ಸಮಯವನ್ನು ನೆನಪಿಸಿ ಕೊಂಡು ಶಾಲಾ ಕಾಲೇಜಿನ ಕ್ಯಾಂಪಸ್ಅನ್ನು ಮುಕ್ತ ಕಂಠದಿಂದ ಹೊಗಳಿದರು.

ಅಲ್ ಇಹಸಾನ್ ಎಜುಕೇಶನ್ ಸೆಂಟರ್ ಮೂಳೂರ್ ಇದರ ಜನರಲ್ ಮ್ಯಾನೇಜರ್ ಮುಸ್ತಫಾ ಸಾದಿ ಮಾತನಾಡಿ ಶಿಕ್ಷಣ ಕೇಂದ್ರದ ಪೂರ್ತಿ ವಿವರವನ್ನು ಹಾಗು ಮುಂದೆ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರ ನೀಡಿದರು.

ದುಬೈಯಿಂದ ವಿಶೇಷವಾಗಿ ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ ಮಹಿಳಾ ಕಾಲೇಜು ನಿರ್ಮಾಣ ಸಮಿತಿ ಅಧ್ಯಕ್ಷ ಮುಹಮ್ಮದ್ ಇಬ್ರಾಹಿಂ (ಎಂ ಈ) ಮೂಳೂರ್ ಮಾತನಾಡಿ ಕಾಲೇಜು ನಿರ್ಮಾಣದ ವಿವರಗಳು ಬಗ್ಗೆ ಮಾತನಾಡಿದರು.

ಅಲ್ ಹಾಜ್ ಅಸ್ಸಯಿದ್ ಆಟಕೋಯ ತಂಗಳ್ ಮಾತನಾಡಿ ಅಲ್ ಇಹಸಾನ್ ಎಜುಕೇಶನ್ ಸೆಂಟರ್ ನ ಬಗ್ಗೆ ತನಗಿರುವ ಪ್ರೀತಿ ಆತ್ಮಾಭಿಮಾನವನ್ನು ನೆರೆದಿದ್ದ ಸಭಿಕರೊಂದಿಗೆ ಹಂಚಿಕೊಂಡರು. ಶಿಕ್ಷಣ ಕೇಂದ್ರದ ಜೊತೆಗಿರುವ ತನ್ನ ೨೨ ವರ್ಷದ ಭಾಂದವ್ಯವನ್ನು ಸಭಿಕರ ಮುಂದೆ ನೆನಪಿಸಿಕೊಂಡರು. ನೆರೆದಿದ್ದ ಸಭಿಕರಲ್ಲಿ ಶಿಕ್ಷಣ ಕೇಂದ್ರದ ಉನ್ನತಿ ಹಾಗು ಪ್ರಗತಿಗಾಗಿ ಕಷ್ಟಪಟ್ಟು ದುಡಿಯುತ್ತಿರುವ ಎಲ್ಲಾ ಭಾಂದವರಿಗೆ ಎಲ್ಲಾ ರೀತಿಯ ಸಹಾಯ ಹಸ್ತವನ್ನು ನೀಡಲು ಪ್ರೇರೇಪಿಸಿದರು.

ಸೌದಿ ಅರೇಬಿಯಾ ದಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ ಸ್ಥಾಪಕ ಸದಸ್ಯ ಹಾಜಿ ಝಯಿನುದ್ದೀನ್ ಮುಕ್ವೆ, ಪುತ್ತೂರು ರವರು ಮಾತನಾಡಿ ಸಂಘಟನೆ ಬೆಳೆದು ಬಂದ ಹಾದಿ ಹಾಗು ಅಲ್ ಹಾಜ್ ಅಸ್ಸಯಿದ್ ಆಟಕೋಯ ತಂಗಳ್ ರವರು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ನ ಅಧ್ಯಕ್ಷರಾಗಲು ಒಪ್ಪಿಕೊಂಡ ಕ್ಷಣವನ್ನು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಮಾನ್ ಡಿಕೆಯಸಿ ರಾಷ್ಟೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಮೋನಬ್ಬ ಅಬ್ದುಲ್ ರಹ್ಮಾನ್, ಎರ್ಮಾಳ್ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಣದ ಮಹತ್ವದ ಬಗ್ಗೆ ನೆರೆದಿದ್ದ ಸಭಿಕರಲ್ಲಿ ಅರಿವನ್ನು ಮೂಡಿಸಿ ಸಂಸ್ಥೆ ಹಮ್ಮಿ ಕೊಂಡಿರುವ ಯೋಜನೆಗಳಿಗೆ ಎಲ್ಲಾ ರೀತಿಯ ಸಹಾಯ ಹಸ್ತವನ್ನು ಉಧಾರ ಮನಸ್ಸಿನಿಂದ ಚಾಚಲು ನೆರೆದವರಲ್ಲಿ ಕೇಳಿಕೊಂಡರು. ಬಳಿಕ ಮೋನಬ್ಬ ಅಬ್ದುಲ್ ರಹ್ಮಾನ್, ಅಬ್ಬಾಸ್ ಉಚ್ಚಿಲ್ ಹಾಗು ರಿಯಾಜ್ ಅಹ್ಮದ್ ಬಸ್ರುರ್ ಅಲ್ ಹಾಜ್ ಅಸ್ಸಯಿದ್ ಆಟಕೋಯ ತಂಗಳ್ ಹಾಗು ಜನಾಬ್ ಕೆ ಆರ್ ರಹಮಾನ್ ಸಾಹೇಬ್ ರವರಿಗೆ ಸ್ಮರಣಿಕೆ ನೀಡಿ ಹಾಗು ಶಾಲು ಹೊದಿಸಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾರತದಿಂದ ಅಬ್ದುಲ್ ರಹಮಾನ್ ತಂಗಳ್ (ಪು ಕೋಯಾ ತಂಗಳ್) ಸೌದಿಯಿಂದ ಅಬ್ದುಲ್ ಗಫೂರ್ ಸಜಿಪ ಸಹ ಆಗಮಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಹಾಗು ಧನ್ಯವಾದ ಸಮರ್ಪಣೆಯನ್ನು ಕಲಂದರ್ ಅಲ್ ಇಹಸಾನ್ ನೆರವೇರಿಸಿದರು. 3 ಸಲಾತ್ ನೊಂದಿಗೆ ಅಂದಿನ ಕಾರ್ಯಕ್ರವನ್ನು ಮುಕ್ತಾಯ ಗೊಳಿಸಲಾಯಿತು.

ವರಧಿ : ತೋನ್ಸೆ ಶೇಖ್ ತಾಜುದ್ದೀನ್ ಮಸ್ಕತ್


Spread the love