ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ಬಳಸಲು ನೈತಿಕತೆ ಇಲ್ಲ : ಸುಶೀಲ್ ನೊರೊನ್ಹ

Spread the love

ಮುಲ್ಕಿ ಸುಂದರರಾಮ ಶೆಟ್ಟಿ ಹೆಸರು ಬಳಸಲು ನೈತಿಕತೆ ಇಲ್ಲ : ಸುಶೀಲ್ ನೊರೊನ್ಹ

ಮಂಗಳೂರು: ಈ ಕರಾವಳಿ ಜಿಲ್ಲೆಯ ಕೇಂದ್ರ ಮಂತ್ರಿಗಳು, ಸಂಸದರು 7 ಶಾಸಕರು ವಿಜಯ ಬ್ಯಾಂಕನ್ನು ಉಳಿಸಲು ಕಿಂಚಿತ್ತು ಶ್ರಮ ಪಡದೆ ಬ್ಯಾಂಕ್ ಆಫ್ ಬರೋಡದೊಡನೆ ವಿಲೀನಗೊಳ್ಳಲು ಕೈ ಜೋಡಿಸಿದ ಬಿಜೆಪಿ ಪಕ್ಷಕ್ಕೆ ಇಂದು ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ಬಳಸಲು ನೈತಿಕತೆ ಇದೆಯೆ? ಕೇವಲ ಮತದಾರರನ್ನು ಓಲೈಸಲು ಸುಂದರರಾಮ ಶೆಟ್ಟಿ ಹೆಸರನ್ನು ಬಳಸಿ ತಾವು ರಾಜ್ಯ ಮತ್ತು ಮಹಾನಗರ ಪಾಲಿಕೆಯಲ್ಲಿ ಆಡಳಿತ ಬಂದಲ್ಲಿ ಲೈಟ್ ಹೌಸ್ ರಸ್ತೆಗೆ ಸುಂದರ ರಾಮ ಶೆಟ್ಟಿ ನಾಮಕರಣ ಮಾಡುತ್ತೇವೆ ಎಂದು ಹೇಳುವುದು ನಾಚಿಕೆಗೇಡು. ಸುಂದರ ರಾಮ ಶೆಟ್ಟಿ ಜೀವಂತವಿದ್ದ ಹಾಗೆ ನೆನಪಿಡಲು ವಿಜಯ ಬ್ಯಾಂಕಿನಲ್ಲಿ ನಮ್ಮ ಕರಾವಳಿಯ ಬ್ಯಾಂಕ್ ಸಿಬ್ಬಂದಿಗಳು ತುಳುವಿನಲ್ಲಿ ಮಾತಾನಾಡುವುದು ಮತ್ತು ಅವರ ಆಚಾರ ವಿಚಾರಗಳು ತುಳು ಸಂಸ್ಕøತಿಯನ್ನು ಸಂಪೂರ್ಣವಾಗಿ ನಶಿಸಿ ಹೋಗುವಂತೆ ಮಾಡಿದ ಕೀರ್ತಿ ಬಿಜೆಪಿ ಪಕ್ಷಕ್ಕೆ ಸಲ್ಲುತ್ತದೆ. ಈ ಜಿಲ್ಲೆಗೆ 16,500 ಕೋಟಿ ಅನುದಾನ ತಂದಿದೆ ಎಂದು ಹೇಳುವ ಇವರು 14000 ಕೋಟಿ ರಾಷ್ಟ್ರೀಯ ಹೆದ್ದಾರಿಗೆ. ಉಳಿದ ಕೇವಲ 2,500 ಕೋಟಿಯನ್ನು ಇತರ ಬಳಕೆಗೆ ಅನುದಾನ ತೋರಿಸುವ ಇವರ ಸಾಧನೆ ಎಷ್ಟು ಎಂದು ಮತದಾರರು ಅರಿತುಕೊಳ್ಳಬೇಕು. ಇಂದಿನ ಜ್ವಲಂತ ಸಮಸ್ಯೆಯಾದ ವಿದ್ಯಾವಂತ ಯುವಕ-ಯುವತಿಯರಿಗೆ ಉದ್ಯೋಗೋಸ್ಕರ ಎಷ್ಟು ಕೈಗಾರಿಕೆಗಳನ್ನು ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗವನ್ನು ದೊರಕಿಸಿಕೊಟ್ಟಿದ್ದಾರೆಂದು ಸಂಸದರು ವಿವರಣೆಯನ್ನು ನೀಡಲಿ. ಮಂಗಳೂರು ಅಂತರಾಷ್ಟ್ರಿಯ ವಿಮಾನ ನಿಲ್ದಾಣ ನಿರ್ವಹಣೆ ಖಾಸಗಿ ಕಂಪೆನಿಗಳಿಗೆ, ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್ ರೈಲ್ವೆ ಇಲಾಖೆಯು ಕಳೆದ ಹತ್ತು ವರುಷಗಳಲ್ಲಿ ಎಷ್ಟರ ಮಟ್ಟಿಗೆ ಪ್ರಗತಿಯನ್ನು ಕಂಡಿದೆ, ಎಷ್ಟು ಹೊಸ ರೈಲುಗಳ ಓಡಾಟಗಳು ಪ್ರಾರಂಬವಾಗಿವೆ ಎಂದು ಕರಾವಳಿಯ ಬುಧ್ದಿವಂತ ಹಾಗೂ ಪ್ರಜ್ಞಾವಂತ ಮತದಾರರು ಅಲೋಚಿಸಬೇಕೆಂದು ಜೆಡಿಎಸ್ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ತಿಳಿಸಿದ್ದಾರೆ.


Spread the love