ರಸ್ತೆ ಅಭಿವೃದ್ದಿಯಾದಲ್ಲಿ ಜೊತೆ ಜನಜೀವನ ಸುಧಾರಣೆ; 59ಲಕ್ಷ ಕಾಮಗಾರಿಗೆ ಚಾಲನೆ ನೀಡಿದ ವಿನಯ್ ಕುಮಾರ್ ಸೊರಕೆ

Spread the love

ರಸ್ತೆ ಅಭಿವೃದ್ದಿಯಾದಲ್ಲಿ ಜೊತೆ ಜನಜೀವನ ಸುಧಾರಣೆ; 59ಲಕ್ಷ ಕಾಮಗಾರಿಗೆ ಚಾಲನೆ ನೀಡಿದ ವಿನಯ್ ಕುಮಾರ್ ಸೊರಕೆ

ಉಡುಪಿ: ಹಳ್ಳಿ ಹಳ್ಳಿ ಗಳಲ್ಲಿ ರಸ್ತೆ ಅಭಿವ್ರದ್ಧಿಯಾದ್ರೆ ಮೂಲಭೂತ ಸೌಕರ್ಯಗಳ ಜೊತೆ ಜನಜೀವನ ಸುಧಾರಣೆಯಾಗುತ್ತದೆ ಎಂದು ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ಕಾಪು ವಿಧಾನ ಸಭಾ ವ್ಯಾಪ್ತಿಯ ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶಾಸಕರ ಮತ್ತು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ನಿಧಿಯಿಂದ ಸುಮಾರು 35 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ ಮತ್ತು ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ ಅಭಿವ್ರದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಕಾಪು ವಿಧಾನ ಸಭಾ ವ್ಯಾಪ್ರಿಯಲ್ಲಿ ಈಗಾಗಲೇ ರಸ್ತೆ ಅಭಿವ್ರದ್ಧಿಯ ಜೊತೆ , ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಕಾರ್ಯ ಬಹಳಷ್ಟು ವೇಗದಲ್ಲಿ ನಡೆಯುತ್ತಿದೆ. ಇನ್ನೂ  ಕೂಡಾ ವಿವಿಧ ಅಭಿವ್ರದ್ಧಿ ಕಾರ್ಯಗಳಿಗೆ ಕಾಯಕಲ್ಪ ನೀಡುವ ಕಾರ್ಯ ಮುಂದುವರಿಸಲಿದ್ಧೇನೆ ಎಂದು ಶಾಸಕರು ತಿಳಿಸಿದರು.

ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷೆ ರಿಯಾಜ್ ಪಳ್ಳಿ, ಉದ್ಯಾವರ ಕಾಂಗ್ರಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಗಿರೀಶ್, ಸ್ಟೀವನ್ ಕುಲಾಸೊ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲಿಲ್ಲಿ ಕಾಮಗಾರಿ ಉದ್ಘಾಟನೆ ಮತ್ತು ಗುದ್ದಲಿ ಪೂಜೆ: ಉದ್ಯಾವರ ಪಂಚಾಯತ್ ವ್ಯಾಪ್ತಿಯ ಮಠದಂಗಡಿಯ ಪಟ್ನತೋಟ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ, ಅಂಕುದ್ರು ಖಾಸೀಂ ಸಾಹೇಬ್ರ ಮನೆಯಿಂದ ಕ್ಲೀಫರ್ಡ್ ಡಿಸೋಜ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವ್ರದ್ಧಿಗೆ ಗುದ್ದಲಿ ಪೂಜೆ, ಅಂಕುದ್ರು ವಿಠಲ ಅವರ ಮನೆಯಿಂದ ರಾಮ ಅವರ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರೀಟಿಕರಣದ ಉದ್ಘಾಟನೆ, ಅಂಕುದ್ರು ನಾರಾಯಣ ಪೂಜಾರಿ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಗೆ ಗುದ್ದಲಿ ಪೂಜೆ, ನಡುಕೇರಿ ಅನ್ವರ್ ಸುಲ್ತಾನ್ ಮನೆಯಿಂದ ರಾಜಾರಾಮ ಮಯ್ಯ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಗುದ್ದಲಿ ಪೂಜೆ, ಆರೂರು ತೋಟ ಸಂಪರ್ಕ ಕಲ್ಪಿಸುವ ರಸ್ತೆ ಗೆ ಗುದ್ದಲಿ ಪೂಜೆ, ಸಂಪಿಗೆ ನಗರ ನವಗ್ರಹ ಕಾಲೋನಿ ಸಂಪರ್ಕ ಕಲ್ಪಿಸುವ ರಸ್ತೆ ಕಾಂಕ್ರೀಟಿಕರಣ ದ ಉದ್ಘಾಟನೆ, ಗೋವಿಂದಗುಡ್ಡೆ ಅಶೋಕ್ ಮನೆಯಿಂದ ರಮೇಶ್ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಉದ್ಘಾಟನೆ, ಚುಳ್ಳಿಕುದ್ರು ಸಂಪರ್ಕ ಕಲ್ಪಿಸುವ ರಸ್ತೆಯ ಉದ್ಘಾಟನೆ, ಮೂಡಲಗುಡ್ಡೆ ಸಂಪರ್ಕ ಕಲ್ಪಿಸುವ ರಸ್ತೆಯ ಗುದ್ದಲಿ ಪೂಜೆ, ಕೋಟೆ ಬಳಿ ರಸ್ತೆ ಅಭಿವ್ರದ್ಧಿ ಕಾಮಗಾರಿಯ ಉದ್ಘಾಟನೆ ನಡೆಯಿತು.


Spread the love