ವಿದ್ಯಾರ್ಥಿಗಳ ಭವಿಷ್ಯ ಬಸ್ಸುಗಳ ಪುಟ್ ಬೋರ್ಡಿನಲ್ಲಿ!

Spread the love

ವಿದ್ಯಾರ್ಥಿಗಳ ಭವಿಷ್ಯ ಬಸ್ಸುಗಳ ಪುಟ್ ಬೋರ್ಡಿನಲ್ಲಿ!

ಬಹಳಷ್ಟು ಮಂದಿ ಬಸ್ಸ್ ನಲ್ಲಿ ಪ್ರಯಾಣ ಮಾಡುವುದು ನಾವು ಕಾಣಬಹುದು, ಅದರಲ್ಲೂ ಬೆಳಿಗ್ಗಿನ ಹೊತ್ತಲ್ಲಿ ವಿಧ್ಯಾರ್ಥಿಗಳೆ ಹೆಚ್ಚು ಪ್ರಯಾಣ ಮಾಡುತ್ತಾರೆ.

ವಿದ್ಯಾರ್ಥಿಗಳು ಇಂದಿನ ಧಾವಂತದ ಬದುಕಿನಲ್ಲಿ ಸಾಗಬೇಕಿದೆ. ಮನೋವೇಗದಲ್ಲಿ ಓಡುವ ಕುದುರೆಗಳ ಬಗ್ಗೆ ಪುರಾಣದಲ್ಲಿ ಯಕ್ಷಗಾನದಲ್ಲಿ ಕೇಳಿ ಮಾತ್ರ ಗೊತ್ತಿದೆ, ನಾವು ಇಂದು ಉಡುಪಿ ಇಲ್ಲ ಕುಂದಾಪುರಕ್ಕೆ ಬಂದಿಳಿದಾಗ ಆ ಕುದುರೆಗಳ ತರಬೇತುದಾರರ ಕುಲದವರೇ ಓಡಿಸುವಂತಿದ್ದ ಖಾಸಗಿ ಬಸ್ಸಗಳ ವೇಗ ಆವೇಗಗಳನ್ನು ಕಾಣಬಹುದು.

ಖಾಸಗಿ ಬಸ್ಸಗಳಿಗೆ ಒಬ್ಬನೇ ನಿರ್ವಾಹಕ ಇದ್ದರು  ಮುಂದೋಗಿ ಎನ್ನೋ ಮಾತು ಕೇಳದೆ, ಭವಿಷ್ಯದ ಬ್ಯಾಗ್ ಹೊತ್ತ ಹತ್ತಾರು ವಿದ್ಯಾರ್ಥಿಗಳು ಬಸ್ಸಿನ ಎರಡು ಬಾಗಿಲಲ್ಲಿ  ನೇತಾಡಿಕೊಂಡೆ ಹೋಗುವುದಾದರೆ ಭವಿಷ್ಯ ರೂಪಿಸುವ ನಾವಾದರೂ ಹೇಳಲೇಬೇಕು.

ಬಸ್ ಪ್ರಯಾಣಿಕರ ಸಂಖ್ಯೆ  ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದರೂ ನಿಮಿಷಕ್ಕೊಂದು ಬಸ್ ಗಳು ಓಡಾಡುತ್ತಿದ್ದರು ಪುಟ್ ಬೋರ್ಡಿನಲ್ಲಿ ನೇತಾಡುವುದು ನಿಂತಿಲ್ಲ. ನಮ್ಮ ವಿದ್ಯಾರ್ಥಿಗಳು ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡೆ ಕಾಲೇಜಿಗೆ ಹೋಗುವುದಾದರೆ ಬಸ್ ಗಳಲ್ಲಿ ನಿರ್ವಾಹಕರು ಯಾಕೆ ಎನ್ನೋ ಪ್ರಶ್ನೆ ಕಾಡುವುದು ಸಹಜ…

ಅಪಾಯಕಾರಿ ಪ್ರಯಾಣ ಸಾಗುತ್ತಿದ್ದಾರೆ ನಮ್ಮ ವಿದ್ಯಾರ್ಥಿಗಳು. ತೀರಾ ಎಡಬದಿಯಲ್ಲಿ ಮುನ್ನುಗುವ ಬಸ್ ಹೆದ್ದಾರಿಯಿಂದ ಕೆಳಗಿಳಿದು ಅನತಿ ದೂರದಲ್ಲಿ ವೇಗವಾಗಿ ಚಲಿಸುತ್ತಿರುವುದು ಕಂಡಾಗ ಇನ್ನೆನು ವಿದ್ಯುತ್ ಕಂಬಗಳಿಗೆ ತಾಗಬಹುದೇನು ಅನ್ನುವಷ್ಟರಲ್ಲಿ ಒಂದಿಂಚಿನಲ್ಲಿ ವಿದ್ಯಾರ್ಥಿಗಳ ಪ್ರಾಣ ಉಳಿಯಿತು.

ಮೂಡಬಿದ್ರೆ, ಕಾರ್ಕಳ, ಬಾರ್ಕೂರು, ಬ್ರಹ್ಮಾವರ, ಕೋಟ, ಬಸ್ರೂರ್ ಹಲವಾರು ಊರಿನ ಅದೆಷ್ಟೊ ಕಾಲೇಜಿನ ವಿದ್ಯಾರ್ಥಿಗಳು ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಪ್ರಯಾಣಿಸುವಾಗ ಅಪಘಾತಕ್ಕೆ ಒಳಗಾಗಿ ಕೆಲವರು ಅಸುನಿಗಿದ್ದಾರೆ, ಇನ್ನೂ ಕೆಲವರು ಶಾಶ್ವತವಾಗಿ ಅಂಗವಿಕಲರಾಗಿದ್ದು ಅದೆಷ್ಟೊ ಉದಾಹರಣೆ ಇದೆ.

ಯಾವುದೇ ಖಾಸಗಿ ಬಸ್ ಚಾಲಕರ ಜಾಗರೂಕತೆಯ ಚಾಲನೆ, ನಿರ್ವಾಹಕನ ಸಲಹೆ ಅತೀ ಮುಖ್ಯವಾಗಿದೆ. ಖಾಸಗಿ ಬಸ್ ಮಾಲಕರೂ ಕೂಡ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಇದರ ಬಗ್ಗೆ ಸ್ಥಳೀಯ ಆರಕ್ಷಕರು, ಆರ್.ಟಿ.ಓ. ಇವರುಗಳು ಸೂಕ್ತ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಭಾಗಿಯಾಗಬೇಕು.

ಉಡುಪಿ-ಕುಂದಾಪುರ ನಡುವೆ ಸರಕಾರಿ ಬಸ್ ಗಳ ತೀರಾ ಅವಶ್ಯಕತೆ ಇದೆ. ಅಲ್ಲಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ಮಾಡಬೇಕಿದೆ.

ಬರಹ: ಹ.ರಾ.ವಿನಯಚಂದ್ರ, ಸಾಸ್ತಾನ ಮಿತ್ರರು ಸದಸ್ಯ


Spread the love