ಹಿಂದೂ ಸಭಾದ ಕೃತ್ಯ ದೇಶಕ್ಕೆ ದೊಡ್ಡ ಅವಮಾನ – ವಿನಯ ಕುಮಾರ್ ಸೊರಕೆ

Spread the love

ಹಿಂದೂ ಸಭಾದ ಕೃತ್ಯ ದೇಶಕ್ಕೆ ದೊಡ್ಡ ಅವಮಾನ – ವಿನಯ ಕುಮಾರ್ ಸೊರಕೆ

ಉಡುಪಿ: ಹುತಾತ್ಮ ದಿನದಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಹತ್ಯೆ ಕೃತ್ಯವನ್ನು ಮರು ಸೃಷ್ಟಿಸಿ ಸಂಭ್ರಮಿಸಿ ಹಿಂದೂ ಮಹಾಸಭಾದ ಕಾರ್ಯಕರ್ತರ ಹೇಯ ಕೃತ್ಯವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಪಂಚಾಯತ್ ರಾಜ್ ಸಂಘಟನೆ ಜಂಟಿಯಾಗಿ ಪ್ರತಿಭಟನೆಯನ್ನು ನಡೆಸಲಾಯಿತು.

ದೇಶದಲ್ಲಿ ಸಂಘ ಪರಿವಾರಕ್ಕೆ ಸಂಬಂಧಪಟ್ಟ ಸಂಘಟನೆಗಳು ಮಹಾತ್ಮಾ ಗಾಂಧಿ ಭಾವಚಿತ್ರಕ್ಕೆ ಗುಂಡು ಹೊಡೆಯುವುದನ್ನು ಪ್ರತ್ಯಾಕ್ಷಿಕೆ ಮೂಲಕ ಮಾಡಿ ಗೋಡ್ಸೆ ಪ್ರತಿಮೆಗೆ ಮಾಲಾರ್ಪಣೆ ಮಾಡಿರುವುದು ಈ ದೇಶದ ರಾಷ್ಟ್ರ ಪ್ರೇಮಿಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನಗೊಳಿಸಲಾಗಿದೆ. ಗಾಂಧೀಜಿಯವರು ಈ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಅಂಥವರಿಗೆ ಅಪಮಾನ ಮಾಡಿರುವುದರಿಂದ ದೇಶವೇ ತಲೆತಗ್ಗಿಸುವಂತಾಗಿದೆ. ರಾಷ್ಟ್ರವೇ ಗಾಂಧಿಜಿಯವರ ಪುಣ್ಯದಿನವನ್ನು ಅಹಿಂಸಾ ದಿನವಾಗಿ ಆಚರಣೆ ಮಾಡುತ್ತಿರುವಾಗ ಗಾಂಧಿ ಹತ್ಯೆಯನ್ನು ಸಮರ್ಥಿಸುವ ಗೋಡ್ಸೆ ಅನುಯಾಯಿಗಳನ್ನು ದೇಶದ ಜನತೆ ಖಂಡಿಸಬೇಕಾಗಿದೆ. ಸಹ ಸಂಘಟನೆಗಳು ಮಹಾತ್ಮಾ ಗಾಂಧಿಯವರಿಗೆ ಅಪಮಾನ ಮಾಡಿದರೂ ಬಿಜೆಪಿ ಮೌನವಾಗಿರುವುದು ಬಿಜೆಪಿಯ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಹೇಳಿದರು.

ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾಜಿ ಶಾಸಕರಾದ ಗೋಪಾಲ ಭಂಡಾರಿಯವರು, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಮ್.ಎ. ಗಪೂರ್, ಕಾರ್ಯದರ್ಶಿ ವೆರೋನಿಕಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜನಾರ್ದನ ತೋನ್ಸೆ ಹಾಗೂ ಉದ್ಯಾವರ ನಾಗೇಶ್ ಕುಮಾರ್ರವರು ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಸತೀಶ್ ಅಮೀನ್ ಪಡುಕರೆ, ಹೆಚ್. ನಿತ್ಯಾನಂದ ಶೆಟ್ಟಿ, ನವೀನ್ಚಂದ್ರ ಸುವರ್ಣ, ಶಂಕರ ಕುಂದರ್, ಮಲ್ಯಾಡಿ ಶಿವರಾಮ ಶೆಟ್ಟಿ, ಪ್ರವೀಣ್ ಶೆಟ್ಟಿ, ಶಶಿಧರ ಶೆಟ್ಟಿ ಎಲ್ಲೂರು, ಎಂ.ಪಿ. ಮೊಯಿದಿನಬ್ಬ, ಇಸ್ಮಾಯಿಲ್ ಆತ್ರಾಡಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಬಿ. ನರಸಿಂಹ ಮೂರ್ತಿ, ಭಾಸ್ಕರ್ ರಾವ್ ಕಿದಿಯೂರು,  ಯತೀಶ್ ಕರ್ಕೇರ, ರೆನಾಲ್ಡ್ ಪ್ರವೀಣ್ ಕುಮಾರ್, ಗಣೇಶ್ ಕೋಟ್ಯಾನ್, ವಿಶ್ವಾಸ್ ಅಮೀನ್, ಹಬೀಬ್ ಅಲಿ, ಮಹಾಬಲ ಕುಂದರ್, ಕೀರ್ತಿ ಶೆಟ್ಟಿ, ಶೇಖರ್ ಜಿ. ಕೋಟ್ಯಾನ್, ಶಬ್ಬೀರ್ ಅಹ್ಮದ್, ಬಿ. ಹಿರಿಯಣ್ಣ, ಕಿರಣ್ ಕುಮಾರ್ ಉದ್ಯಾವರ, ಜನಾರ್ದನ ಭಂಡಾರ್ಕಾರ್, ಗೀತಾ ವಾಗ್ಲೆ, ಚಂದ್ರಿಕಾ ಶೆಟ್ಟಿ, ಡಾ. ಸುನಿತಾ ಶೆಟ್ಟಿ, ಸುಗಂಧಿ ಶೇಖರ್, ನಾರಾಯಣ ಕುಂದರ್, ಹರೀಶ್ ಶೆಟ್ಟಿ ಪಾಂಗಳ, ವಿಜಯ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ಮುರುಳಿ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಪ್ರಭಾವತಿ ಸಾಲ್ಯಾನ್, ಸತೀಶ್ ಜಪ್ತಿ, ದಿನೇಶ್ ಕೋಟ್ಯಾನ್, ಸೋಮನಾಥ ಬಿ.ಕೆ. ಸೂರ್ಯ ಸಾಲ್ಯಾನ್, ಮೇರಿ ಡಿ’ಸೋಜಾ. ರಾಜೀವ್ ಗಾಂಧಿ ಪಂಚಾಯತ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್ ಸ್ವಾಗತಿಸಿ, ವೈ.ಬಿ. ರಾಘವೇಂದ್ರ ಧನ್ಯವಾದವಿತ್ತರು.


Spread the love