ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 36 ನೇ ಪದವಿ ಪ್ರದಾನ ಸಮಾರಂಭ
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 36ನೇ ಪದವಿ ಪ್ರದಾನ ಸಮಾರಂಭವನ್ನು ದಿನಾಂಕ 16.04.2026 ರಂದು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಆಯೋಜಿಸಲಾಯಿತು.
ಪ್ರವೇಶದ್ವಾರದಿಂದ ಬ್ಯಾಂಡ್ ಹಾಗೂ ಭವ್ಯ ಮೆರವಣಿಗೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವಂತಹ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ, ಮುಖ್ಯ ಅತಿಥಿಗಳಾದ ಮಂಗಳೂರಿನ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿ ಡಾ ಕೆ ಎಸ್ ಗಂಗಾಧರ ಸೋಮಯಾಜಿ, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಫೌಸ್ಟಿನ್ ಲೂಕಸ್ ಲೋಬೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಡಳಿತಾಧಿಕಾರಿ ವಂದನೀಯ ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂದನೀಯ ಅಶ್ವಿನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್ ನ ಆಡಳಿತಾಧಿಕಾರಿ ವಂದನೀಯ ಫಾದರ್ ನೆಲ್ಸನ್ ಧೀರಾಜ್ ಪಾಯಸ್ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನವಾಡ ಯು.ಕೆ., 2026 ರ ಪದವಿ ಪ್ರದಾನ ಸಮಾರಂಭದ ಸಂಚಾಲಕಿಯಾದ ಡಾ. ರೆಶೆಲ್ ನೊರೊನ್ಹಾ ಅವರನ್ನು ಸಾಂಪ್ರದಾಯಿಕ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯಲ್ಲಿ ಸರ್ವಶಕ್ತನ ಆಶೀರ್ವಾದವನ್ನು ಕೋರುವ ಮೂಲಕ ಔಪಚಾರಿಕ ಕಾರ್ಯಕ್ರಮವು ಪ್ರಾರಂಬಿಸಲಾಯಿತು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಫೌಸ್ಟಿನ್ ಲೂಕಸ್ ಲೋಬೊರವರು, ಸ್ವಾಗತ ಭಾಷಣದಲ್ಲಿ ಜ್ಞಾನ, ಪರಿಶ್ರಮ ಮತ್ತು ಧೈರ್ಯದ ಮೌಲ್ಯಗಳನ್ನು ಒತ್ತಿಹೇಳಿದರು ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ 146 ವರ್ಷದ ಪರಂಪರೆ ಹಾಗೂ ಹೋಮಿಯೋಪಥಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿ, ಪದವೀಧರರು ಕರುಣೆಯಿಂದ ಸೇವೆ ಸಲ್ಲಿಸಿ, ಜವಾಬ್ದಾರಿಯುತ ಚಿಕಿತ್ಸಕರಾಗಿ ತಮ್ಮ ಪಾತ್ರವನ್ನು ನಿಭಾಯಿಸುವಂತೆ ಪ್ರೇರೇಪಿಸಿದರು ಮತ್ತು ಅವರು ಕಾರ್ಯಕ್ರಮದ ಮುಖ್ಯ ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರು 2025-26ನೇ ಶೈಕ್ಷಣಿಕ ವರ್ಷದ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಚಟುವಟಿಕೆಗಳ ವಿವರಣಾತ್ಮಕ ವಾರ್ಷಿಕ ವರದಿಯನ್ನು ಮಂಡಿಸಿದರು.
ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಜನವರಿ 6, 2026 ರಿಂದ ಜನವರಿ 5, 2028ರ ಅವಧಿಯವರಗೆ NABH ಆಯುಷ್ ಪ್ರವೇಶ ಮಟ್ಟದ ಮಾನ್ಯತೆ ನೀಡಲಾಗಿದೆ ಎಂದು ಘೋಷಿಸಲು ಸಂಸ್ಥೆಯು ಹೆಮ್ಮೆಪಡುತ್ತದೆ. ಇದಲ್ಲದೆ, ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿರುವ “ವೈದ್ಯಕೀಯ ಪ್ರಯೋಗಾಲಯ”ವು ಏಪ್ರಿಲ್ 1, 2026 ರಿಂದ ಮಾರ್ಚ್ 31, 2030 ರವರೆಗಿನ ಅವಧಿಗೆ NABL ನೊಂದಿಗೆ ಮಾನ್ಯತೆಯನ್ನು ಪಡೆದಿದೆ. ಇದರ ಪ್ರಯುಕ್ತ ಕಾರ್ಯಕ್ರಮದಲ್ಲಿ ನಿರ್ದೇಶಕರಿಗೆ NABH ಮತ್ತು NABL ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಯಿತು.
ಸಂಸ್ಥೆಯ ಅಭಿವೃದ್ಧಿಯ ಮಹತ್ವದ ಹೆಜ್ಜೆಯಾಗಿ ಗುರುತಿಸಲ್ಪಡುವ ನವೀನ ಸೌಂದರ್ಯವರ್ಧಕ ಉತ್ಪನ್ನಗಳನ್ನು ಪರಿಚಯಿಸುವ ಉದ್ದೇಶದಿಂದ, FMHPD ಆಡಳಿತಾಧಿಕಾರಿ ವಂದನೀಯ ಫಾ. ನೆಲ್ಸನ್ ಧೀರಜ್ ಪಾಯಸ್ ಅವರಿಂದ ಹೊಸ HPD ಉತ್ಪನ್ನಗಳಾದ ‘ಮುಲ್ಲರ್ಸ್ ಕಾಸ್ಮೆಸ್ಯೂಟಿಕಲ್ಸ್’ ಅನ್ನು ಬಿಡುಗಡೆ ಮಾಡಲಾಯಿತು.

ಮುಖ್ಯ ಅತಿಥಿ ಡಾ ಕೆ ಎಸ್ ಗಂಗಾಧರ ಸೋಮಯಾಜಿ ಅವರು ಪದವೀಧರರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ನೀಡಿದರು, ನಂತರ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ಅವರ ನೇತೃತ್ವದಲ್ಲಿ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವಂತಹ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ, ಸ್ನಾತಕೋತ್ತರ ಪದವೀಧರರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಒಟ್ಟು 111 ವಿದ್ಯಾರ್ಥಿಗಳು, 92 ಹೋಮಿಯೋಪಥಿ ಪದವೀಧರರು ಮತ್ತು 19 ಸ್ನಾತಕೋತ್ತರ ಪದವೀಧರರಿಗೆ ಪದವಿಯನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾದ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಅವರು ಈ ದಿನವನ್ನು ವಿಶೇಷ ಮೈಲಿಗಲ್ಲು ಎಂದು ವರ್ಣಿಸಿ, ಪದವೀಧರರು ಈಗ ಮಾನ್ಯತೆ ಪಡೆದ ವೈದ್ಯರಾಗಿ ರೂಪಾಂತರಗೊಳ್ಳುತ್ತಿರುವುದಾಗಿ ಹೇಳಿದರು. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಅವರು ಪ್ರತಿಷ್ಠಿತ ಸಂಸ್ಥೆಯಿಂದ ಪದವಿ ಪಡೆಯುತ್ತಿರುವುದನ್ನು ಉಲ್ಲೇಖಿಸಿದರು. ಹೋಮಿಯೋಪಥಿಯ ಸಹಾನುಭೂತಿ ಹಾಗೂ ಸಮಗ್ರ (ಹೋಲಿಸ್ಟಿಕ್) ದೃಷ್ಟಿಕೋನವನ್ನು, ವಿಶೇಷವಾಗಿ ರೋಗಿಯ ವಿವರ ಸಂಗ್ರಹಣೆಯ ಮಹತ್ವವನ್ನು ಅವರು ಒತ್ತಿಹೇಳಿದರು. ಮುಂದಿನ ವಿದ್ಯಾಭ್ಯಾಸ ಮತ್ತು ಸಂಶೋಧನೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದರು ಹಾಗೂ ಸದಾ ರೋಗಿಗಳನ್ನು, ತಮ್ಮ ಮಾತೃಸಂಸ್ಥೆಯನ್ನು, ಶಿಕ್ಷಕರನ್ನು ಹಾಗೂ ತಮ್ಮ ಪೋಷಕರನ್ನು ಗೌರವಿಸಬೇಕು ಎಂದು ಹೇಳಿದರು.
ಪದವೀಧರರ ಪರವಾಗಿ, ಶ್ರೀಕನ್ಯ ಕೆ ಎಚ್ ಸಂಸ್ಥೆಗಳಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ FMCI ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಾಲ್ಡಾನ್ಹಾ ಅವರು ವಿಶ್ವವಿದ್ಯಾಲಯದ Rank ಪಡೆದ ವಿದ್ಯಾರ್ಥಿಗಳು, ವಿಷಯವಾರು ಬಹುಮಾನ ವಿಜೇತರು ಮತ್ತು ಶೈಕ್ಷಣಿಕ ಹಾಗೂ ಪೂರಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ 8 ಸಂಸ್ಥಾ ಮಟ್ಟದ ಬಹುಮಾನಗಳು, 12 ಪದವಿ ಮಟ್ಟದ ಮತ್ತು 5 ಸ್ನಾತಕೋತ್ತರ ವಿಷಯವಾರು ಬಹುಮಾನಗಳನ್ನು ವಿತರಿಸಲಾಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾಲೇಜು 4 ಪದವಿ ಮತ್ತು 12 ಸ್ನಾತಕೋತ್ತರ Rank ಪಡೆದವರನ್ನು ಕೂಡ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಹೋಮಿಯೋಪಥಿಕ್ ಮಟೀರಿಯಾ ಮೆಡಿಕಾ (MD) ವಿಭಾಗದಲ್ಲಿ RGUHS ಚಿನ್ನದ ಪದಕವನ್ನು ಡಾ. ಮೆರ್ಲಿನ್ ಲಿಜಾ ಜೇಮ್ಸ್ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹೋಮಿಯೋಪಥಿಯಲ್ಲಿ ಅತ್ಯುತ್ತಮ ಕ್ವಾಲಿಟಿ ಎಂ.ಡಿ ಡಿಸರ್ಟೇಶನ್ ಇನ್ ಹೋಮಿಯೋಪಥಿ CCRH ವಿದ್ಯಾರ್ಥಿವೇತನವನ್ನು ಡಾ. ಶ್ರೇಯಾಂಕ್ ಎಸ್ ಕೋಟ್ಯನ್ ಎಂ.ಡಿ(ಹೋಂ) ಪೀಡಿಯಾಟ್ರಿಕ್ಸ್ ಅವರಿಗೆ ನೀಡಲಾಯಿತು.
ಬ್ಯಾಚ್ 2020-21 ರ ಪದವಿ ಪಡೆಯುವ ಪದವೀಧರರಲ್ಲಿ ದಕ್ಷಿಣ ವಲಯದ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಮೂರು ಬಾರಿ RGUHS ಬ್ಯಾಡ್ಮಿಂಟನ್ ಮಹಿಳಾ ತಂಡವನ್ನು ಪ್ರತಿನಿಧಿಸಿದ ಕೆ. ಕಾದಂಬರಿ, ಅಖಿಲ ಭಾರತ ವಿಶ್ವವಿದ್ಯಾಲಯ ಚಾಂಪಿಯನ್‌ಶಿಪ್‌ನಲ್ಲಿ RGUHS ಅಥ್ಲೆಟಿಕ್ ತಂಡವನ್ನು ಪ್ರತಿನಿಧಿಸಿದ ಶಿಥಿಲ್ ಜೋಸೆಫ್ ಮತ್ತು ಅಖಿಲ ಭಾರತ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ RGUHS ಟಗ್ ಆಫ್ ವಾರ್ ಮಹಿಳಾ ತಂಡವನ್ನು ಪ್ರತಿನಿಧಿಸಿದ ಅಲ್ವಿಯಾ ಪರ್ಲ್ ರೊಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು.
2017–18ರ FMHMC ಹಳೆಯ ವಿದ್ಯಾರ್ಥಿಗಳಿಂದ ಹಾಗೂ ದಿವಂಗತ ಡಾ. ಜಾನು ಪರ್ಲಿ ಶ್ಯಾರನ್ ಅವರ ಪೋಷಕರಿಂದ ಪ್ರಾಯೋಜಿತವಾಗಿರುವ “ಡಾ. ಜಾನು ಪರ್ಲಿ ಶ್ಯಾರನ್ ಸ್ಮಾರಕ ಸಂಶೋಧನಾ ಪ್ರಶಸ್ತಿ” ಯನ್ನು, ಸಂಶೋಧನೆ ಮತ್ತು ಪ್ರಕಟಣೆಗಳಲ್ಲಿ ವಿಶಿಷ್ಟ ಸಾಧನೆ ತೋರಿದ , ಅತ್ಯುತ್ತಮ ಔಟ್ ಗೋಯಿಂಗ್ ವಿದ್ಯಾರ್ಥಿ ಸಂಶೋಧನಾ ಪ್ರಶಸ್ತಿಯನ್ನು 2020-21 ಬ್ಯಾಚ್ ನ ಡಾ. ಕೆ. ಕಾದಂಬರಿ ಅವರಿಗೆ ನೀಡಲಾಯಿತು.
1997ರ ಹಳೆಯ ವಿದ್ಯಾರ್ಥಿಗಳಿಂದ ಸ್ಥಾಪಿತವಾದ ವರ್ಷದ “ದಿ ಅವಾರ್ಡ್ ಆಫ್ ಎಕ್ಸಲೆನ್ಸ್ ಫಾರ್ ಅಂಡರ್‌ಗ್ರಾಜುವೇಟ್ ಸ್ಟೂಡೆಂಟ್” ಪ್ರಶಸ್ತಿಯನ್ನು 2020-21 ಬ್ಯಾಚ್ ನ ಡಾ ಶ್ರೀಕನ್ಯ ಕೆ ಎಚ್ ಅವರಿಗೆ ನೀಡಲಾಯಿತು.
6ನೇ ಬ್ಯಾಚ್ ಮುಲ್ಲೇರಿಯನ್ಸ್ ಪ್ರಾಯೋಜಿತ, “ಡಾ. ಸುಮೋದ್ ಜಾಕೋಬ್ ಸೊಲೊಮನ್ ಅವಾರ್ಡ್ ಆಫ್ ಎಕ್ಸಲೆನ್ಸ್ ಫಾರ್ ಪೋಸ್ಟ್‌ಗ್ರಾಜುವೇಟ್ ಸ್ಟೂಡೆಂಟ್” 2022-23 ಬ್ಯಾಚ್ ನ ಡಾ. ಅಕ್ಷರಾ ಟಿ. ಅವರಿಗೆ ನೀಡಲಾಯಿತು.
FMHMC ಮಾಜಿ ಪ್ರಾಂಶುಪಾಲರಾದ ಡಾ. ಎಸ್. ಕೆ. ತಿವಾರಿ ಅವರಿಂದ, ಅವರ ಪ್ರಿಯ ಪತ್ನಿ ದಿವಂಗತ ಶ್ರೀಮತಿ ಸವಿತಾ ತಿವಾರಿ ಅವರ ಸ್ಮರಣಾರ್ಥ ಪ್ರಾಯೋಜಿತ “ದಿ ಬೆಸ್ಟ್ ಔಟ್‌ಗೋಯಿಂಗ್ ಪೋಸ್ಟ್‌ಗ್ರಾಜುವೇಟ್ ಅವಾರ್ಡ್” ಪ್ರಶಸ್ತಿಯನ್ನು 2022-23 ಬ್ಯಾಚ್ ನ ಡಾ. ಅಕ್ಷಯ್ ಜೆ ನಾಯರ್ ಅವರಿಗೆ ನೀಡಲಾಯಿತು.
“ಫಾದರ್ ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷರ ಚಿನ್ನದ ಪದಕ”ವನ್ನು ಬೆಸ್ಟ್ ಔಟ್‌ಗೋಯಿಂಗ್ ಅಂಡರ್‌ಗ್ರಾಜುವೇಟ್” ಪ್ರಶಸ್ತಿಯನ್ನು 2020-21 ಬ್ಯಾಚ್ ನ ಡಾ. ಅಖಿಲ್ ಮೊಂತೇರೊ ಅವರಿಗೆ ನೀಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ ಕೆ ಎಸ್ ಗಂಗಾಧರ ಸೋಮಯಾಜಿಯವರನ್ನು ಅತೀ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ, ರವರು ಸನ್ಮಾನಿಸಿದರು.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮತ್ತು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವೀಧರರು, ಸ್ನಾತಕೋತ್ತರರು ಮತ್ತು ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭವನ್ನು ಒಂದು ಮೈಲುಗಲ್ಲು ಹಾಗೂ ಹೊಣೆಗಾರಿಕೆಯ ಕ್ಷಣವೆಂದು ವಿವರಿಸಿದರು ಮತ್ತು ಸ್ಯಾಮ್ಯುಯೆಲ್ ಹಾನಿಮನ್ ರವರ ಪರಂಪರೆಯನ್ನು ಸ್ಮರಿಸಿ, ವೇಗವಾಗಿ ಅಭಿವೃದ್ಧಿಯಾಗುತ್ತಿರುವ ವಿಶ್ವದಲ್ಲಿ ನವೀನತೆ ಮತ್ತು ಸಂಶೋಧನೆಯ ಅಗತ್ಯವನ್ನು ಒತ್ತಿಹೇಳಿದರು. ಜೊತೆಗೆ, ವ್ಯಕ್ತಿಗತ ಹಾಗೂ ಸಹಾನುಭೂತಿಯುತ ಆರೈಕೆಯಲ್ಲಿ ಹೋಮಿಯೋಪಥಿಯ ವಿಶೇಷತೆಯನ್ನು ಉಲ್ಲೇಖಿಸಿದರು.
ನಂತರ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಫೌಸ್ಟಿನ್ ಲೂಕಸ್ ಲೋಬೊ, ಕಾರ್ಯಕ್ರಮದ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರನ್ನು ಕೃತಜ್ಞತೆಯ ಸಂಕೇತದೊಂದಿಗೆ ಸನ್ಮಾನಿಸಿದರು.
FMHMC&H ಆಡಳಿತಾಧಿಕಾರಿ ವಂದನೀಯ ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ ಅವರು ಕೃತಜ್ಞತಾ ನಮನವನ್ನು ಸಲ್ಲಿಸಿದರು.
ಪದವಿ ಪ್ರದಾನ ಸಮಾರಂಭವು ಸಂಸ್ಥೆಯ ಗೀತೆಯೊಂದಿಗೆ ಮುಕ್ತಾಯಗೊಂಡಿತು. ಡಾ. ಮೇಬಲ್ ಪಿ ಅಂದ್ರದೆ ಮತ್ತು ಡಾ. ಶ್ರೇಯಾಂಕ್ ಕೋಟ್ಯಾನ್ ಅವರು ಪದವಿ ಪ್ರದಾನ ಕಾರ್ಯಕ್ರಮದ ನಿರೂಪಕರಾಗಿದ್ದರು.
ಅದೇ ದಿನ ಬೆಳಿಗ್ಗೆ 6.30ಕ್ಕೆ ದೇರಳಕಟ್ಟೆಯ “ಅವರ್ ಲೇಡಿ ಆಫ್ ಲೂರ್ಡ್ಸ್ ಚಾಪೆಲ್”ನಲ್ಲಿ FMHMC&Hನ ಮಾಜಿ ಆಡಳಿತಾಧಿಕಾರಿ ವಂದನಿಯ. ಫಾ. ರೋಶನ್ ಕ್ರಾಸ್ತಾ ಅವರಿಂದ ಕೃತಜ್ಞತಾ ಬಲಿಪೂಜೆಯನ್ನು ನೆರೆವೇರಿಸಿದರು. ಈ ಕಾರ್ಯಕ್ರಮದಲ್ಲಿ ಪದವೀಧರರು, ಅವರ ಪೋಷಕರು ಹಾಗೂ ಸಿಬ್ಬಂದಿ ಭಾಗವಹಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ವಂದನೀಯ ಅಶ್ವಿನ್ ಕ್ರಾಸ್ತಾ, ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್ ನ ಆಡಳಿತಾಧಿಕಾರಿ ವಂದನೀಯ ಫಾದರ್ ನೆಲ್ಸನ್ ಧೀರಾಜ್ ಪಾಯ್ಸ್, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜಾ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನವಾಡ ಯು.ಕೆ., ಕಾರ್ಯಕ್ರಮದ ಸಂಚಾಲಕಿಯಾದ ಡಾ. ರೆಶೆಲ್ ನೊರೊನ್ಹಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.












