ಮಟಪಾಡಿಯಲ್ಲಿ ನೂತನ ಸರ್ಕಾರಿ ಸಾರಿಗೆ ಬಸ್ಸಿಗೆ ಸಂಭ್ರಮದ ಸ್ವಾಗತ

Spread the love

ಮಟಪಾಡಿಯಲ್ಲಿ ನೂತನ ಸರ್ಕಾರಿ ಸಾರಿಗೆ ಬಸ್ಸಿಗೆ ಸಂಭ್ರಮದ ಸ್ವಾಗತ

ಬ್ರಹ್ಮಾವರ: ಉಡುಪಿ–ಕೊಕ್ಕರ್ಣೆ ಮಾರ್ಗದಲ್ಲಿ ಬ್ರಹ್ಮಾವರ, ಮಟಪಾಡಿ–ನೀಲಾವರ ಮೂಲಕ ಸಂಚರಿಸಲಿರುವ ನೂತನ ಸರ್ಕಾರಿ ಸಾರಿಗೆ ಬಸ್ಸಿಗೆ ಮಟಪಾಡಿ ಗ್ರಾಮದಲ್ಲಿ ಸಂಭ್ರಮದ ಸ್ವಾಗತ ಕೋರಲಾಯಿತು.

ಫ್ರೆಂಡ್ಸ್ ಮಟಪಾಡಿ ಯೂಥ್ ಕ್ಲಬ್ ವತಿಯಿಂದ ಗ್ರಾಮಕ್ಕೆ ಆಗಮಿಸಿದ ಬಸ್ಸಿಗೆ ಹೂವಿನ ಹಾರ ಹಾಕಿ, ಆರತಿ ಬೆಳಗಿ, ತೆಂಗಿನಕಾಯಿ ಒಡೆದು ಹಾಗೂ ಪಟಾಕಿ ಸಿಡಿಸಿ ಭವ್ಯ ಸ್ವಾಗತ ನೀಡಲಾಯಿತು. ಇದೇ ವೇಳೆ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಗೆ ತಂಪು ಪಾನೀಯ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಮಟಪಾಡಿ ಯೂಥ್ ಕ್ಲಬ್ ಅಧ್ಯಕ್ಷ ಚೇತನ್ ಜಿ ಪೂಜಾರಿ, ಪ್ರಧಾನ ಕಾರ್ಯದರ್ಶಿ ಜಾಯ್ಸನ್, ಕೋಶಾಧಿಕಾರಿ ಚೇತನ ಆಚಾರ್ಯ, ಸುದರ್ಶನ್, ಅಂಕುಶ್, ಗೌರವ ಸಲಹೆಗಾರ ಶರೋನ್, ಸದಸ್ಯರಾದ ಸುಬ್ರಮಣ್ಯ ಆಚಾರ್ಯ, ಶರತ್ ನಾಯಕ್, ಭರತ್ ನಾಯಕ್, ಅಕ್ಷಯ, ಮಿಥುನ ಅಮೀನ್, ರಾಹುಲ್ ಪೂಜಾರಿ, ಮಂಜುನಾಥ್ ಭಂಡಾರಿ ಪ್ರೀತಮ್ ನಾಯಕ್ ಸೋಲನ್ ಸಿಕ್ವೇರಾ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಬಸ್ ಸೇವೆಗಾಗಿ ಹೋರಾಟ ನಡೆಸಿದ ಎಲ್ಲರಿಗೂ ಕ್ಲಬ್ ವತಿಯಿಂದ ಧನ್ಯವಾದ ಸಲ್ಲಿಸಲಾಯಿತು. ಅಲ್ಲದೆ, ಈ ಭಾಗದ ಸಾರ್ವಜನಿಕರು ಹೊಸ ಬಸ್ ಸೇವೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.


Spread the love