ಪಿಣರಾಯಿ ವಿಜಯನ್ ಮೇಲೆ ಇ.ಡಿ ದಾಳಿ ರಾಜಕೀಯ ಪ್ರೇರಿತ- ಸುರೇಶ್ ಕಲ್ಲಾಗರ

Spread the love

ಪಿಣರಾಯಿ ವಿಜಯನ್ ಮೇಲೆ ಇ.ಡಿ ದಾಳಿ ರಾಜಕೀಯ ಪ್ರೇರಿತ- ಸುರೇಶ್ ಕಲ್ಲಾಗರ

ಉಡುಪಿ: ಕೇಂದ್ರ ಸರಕಾರವು ಸಿಪಿಎಂ ಪಕ್ಷವನ್ನು ಮುಗಿಸಲು ಪಕ್ಷದ ಪೊಲಿಟ್ ಬ್ಯೂರೋ ಸದಸ್ಯರಾದ ಕೇರಳದ ಮಾಜಿ ಮುಖ್ಯಮಂತ್ರಿಯ ಮನೆ ಮೇಲೆ ದಾಳಿ ನಡೆಸುತ್ತಿದೆ ಎಂದು ಸಿಪಿಎಂ ನಾಯಕ ಸುರೇಶ್ ಕಲ್ಲಾಗರ ಆರೋಪಿಸಿದರು.

ಅವರು ಶುಕ್ರವಾರ ಸಿಪಿಎಂ ಸಂಘಟನೆ ವತಿಯಿಂದ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸದ ಮೇಲೆ ನಡೆದ ಇಡಿ ದಾಳಿ ವಿರೋಧಿಸಿ ಉಡುಪಿಯಲ್ಲಿ ಆಯೋಜಿಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.

ಪಿಣರಾಯ ವಿಜಯನ್ ಅವರಿಗೂ ಎಕ್ಸಾಲಾಜಿಕ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯ ಗಮನಿಸಿದೆ ಆದರೂ ಬಿಜೆಪಿ ನೇತೃತ್ವದ ಸರ್ಕಾರ ಪಿಣರಾಯಿ ವಿಜಯನ್ ಅವರನ್ನು ಗುರಿ ಮಾಡಿ ಕೇರಳದ ಪಕ್ಷವನ್ನು ಮುಗಿಸಲು ಹತಾಶ ಪ್ರಯತ್ನ ನಡೆಸುತ್ತಿದೆ. ಆದರೆ ಕೇರಳದ ಜನ ಸಿಪಿಎಂ ಪಕ್ಷ ಹಾಗೂ ಮುಖಂಡರನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂಬುವುದನ್ನು ನಿನ್ನೆ ಇ ಡಿ ಅಧಿಕಾರಿಗಳು ಬಂದಾಗ ಸೇರಿದ ಜನಸ್ತೋಮವೇ ಸಾಕ್ಷಿ.

ನಾವು ಸಿಪಿಎಂ ಪಕ್ಷವಾಗಿ ತನಿಖೆಗೆ ಅಡ್ಡಿಪಡಿಸುತ್ತಿಲ್ಲ ಆದರೆ ವಿನಾಕಾರಣ ರಾಜಕೀಯ ಪ್ರೇರಿತವಾಗಿ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡು ನಡೆಸುವ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ಪಕ್ಷ ಬೆಳೆಸಲು ಮಾಡುವ ದಾಳಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸಿಪಿಎಂ ಕೇಂದ್ರ ಸಮಿತಿ ನಾಯಕರು ಮೊನ್ನೆ ದೆಹಲಿ ಜಾರಿ ನಿರ್ದೇಶನಾಲಯದ ಎದುರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅವರನ್ನು ಬಂಧಿಸಿರುವ ಕ್ರಮ ದೇಶದ ಪ್ರಜಾಪ್ರಭುತ್ವ ಹಕ್ಕುಗಳ ಮೇಲಿನ ದಾಳಿಯಾಗಿದೆ ಇದರ ವಿರುದ್ಧ ದೇಶಾದ್ಯಂತ ಸಿಪಿಎಂ ಪ್ರತಿಭಟಿಸುತ್ತಿದೆ ಎಂದು ಹೇಳಿದರು.

ಈ ದೇಶದಲ್ಲಿ ದುಡಿಯುವ ವರ್ಗ ಇರುವ ತನಕ ದುಡಿಯುವ ವರ್ಗದ ರಾಜಕೀಯವನ್ನು ಕೊನೆಗಾಣಿಸಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ.ಜನರ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಸಿಪಿಎಂ ಪಕ್ಷ ಯಾವ ಬೆದರಿಕೆಗೂ ಬಗ್ಗುವುದಿಲ್ಲ. ಜಗತ್ತಿನ ಎಲ್ಲಾ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಟ ನಡೆಸುವುದು ಈ ಕೆಂಬಾವುಟದ ಚರಿತ್ರೆಯಾಗಿದೆ.

ಜಗತ್ತಿನ ಜನರನ್ನು ಶೋಷಿಸುತ್ತಿದ್ದ ಹಿಟ್ಲರ್ ನನ್ನು ಸೋಲಿಸಿದ್ದು ಇದೇ ಕೆಂಬಾವುಟದ ಕೆಂಪು ಸೇನೆ ಎಂಬುದು ನೆನಪಿಡಿ ನಿಮ್ಮ ದೌರ್ಜನ್ಯ ನಿಮ್ಮ ಅಧಿಕಾರವನ್ನು ಕೊನೆಗಾಣಿಸುವುದು ಕೂಡ ಇದೇ ಕಾರ್ಮಿಕ ವರ್ಗ ಎಂದು ಎಚ್ಚರಿಕೆ ನೀಡಿದರು.

ಕಾರ್ಯದರ್ಶಿ ಮಂಡಳಿ ಸದಸ್ಯ ಚಂದ್ರಶೇಖರ ವಿ ಮಾತನಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕಮ್ಯುನಿಸ್ಟ್ ನಾಯಕರು ಸ್ವಾತಂತ್ರ್ಯ ದಿನಾಚರಣೆ ದಿನದಂದು ಜೈಲಲ್ಲೆ ಇದ್ದರು, ತುರ್ತು ಪರಿಸ್ಥಿತಿ ಕಾಲದಲ್ಲಿಯೂ ಜೈಲಲ್ಲಿ ಹಲವು ಶಿಕ್ಷೆಗಳನ್ನು ಅನುಭವಿಸಿದ್ದರು.ತ್ರಿಪುರ, ಕೋಲ್ಕತಾದಲ್ಲಿ ಫ್ಯಾಶಿಸ್ಟ್ ದಾಳಿಯನ್ನು ಎದುರಿಸಿ ಜೀವಕೊಟ್ಟ ಕಮ್ಯುನಿಸ್ಟ್ ನಾಯಕರನ್ನು ನೀವು ಹೆದರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಂಡಳಿ ಸದಸ್ಯ ಎಚ್ ನರಸಿಂಹ ಉಡಪಿ ವಲಯ ಕಾರ್ಯದರ್ಶಿ ಶಶಿಧರ ಗೊಲ್ಲ, ಕವಿರಾಜ್ ಎಸ್ ಕಾಂಚನ್, ಶೀಲಾವತಿ, ಉಮೇಶ್ ಕುಂದರ್, ಸುರೇಂದ್ರ ಎಚ್, ಬಲ್ಕೀಸ್, ಸಂಜೀವ ಬಳ್ಕೂರು, ಸರೋಜ ,ಚಿಕ್ಕ ಮೊಗವೀರ ಗಂಗೊಳ್ಳಿ ಇದ್ದರು.


Spread the love
Subscribe
Notify of

0 Comments