ಮಂಗಳೂರಿನಲ್ಲಿ ಕಾರ್ ಮಾಡಿಫಿಕೇಶನ್ ಸೆಂಟರ್‌ ನಲ್ಲಿ ಬೆಂಕಿ ಅವಘಡ

Spread the love

ಮಂಗಳೂರಿನಲ್ಲಿ ಕಾರ್ ಮಾಡಿಫಿಕೇಶನ್ ಸೆಂಟರ್‌ ನಲ್ಲಿ ಬೆಂಕಿ ಅವಘಡ

ಮಂಗಳೂರು: ನಗರದ ಫಳ್ನೀರ್ ಸಮೀಪದ ಟೋಪಾಜ್ ಕಾರ್ ಮಾಡಿಫಿಕೇಶನ್ ಸೆಂಟರ್‌ನಲ್ಲಿ ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಿಂದ ಎರಡು BMW ಕಾರುಗಳಿಗೆ ಹಾನಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿನಷ್ಟ ಉಂಟಾಗಿದೆ.

ಇಂದು ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ವ್ಯಾಪಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಕಾರ್ ಸೆಂಟರ್ ಮಾಜಿ ಶಾಸಕ ಮೊಯ್ದೀನ್ ಬಾವ ಅವರ ತಂಗಿಯ ಮಗ ಸಿಯಾಜ್ ಅವರಿಗೆ ಸೇರಿದುದಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ದೌಡಾಯಿಸಿದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love