ಕೆ. ಜಯಪ್ರಕಾಶ್ ಹೆಗ್ಡೆಯವರು ಸಚಿವರಾಗಲಿ : ಕೆ. ವಿಕಾಸ್ ಹೆಗ್ಡೆ

Spread the love

ಕೆ. ಜಯಪ್ರಕಾಶ್ ಹೆಗ್ಡೆಯವರು ಸಚಿವರಾಗಲಿ : ಕೆ. ವಿಕಾಸ್ ಹೆಗ್ಡೆ

ಕುಂದಾಪುರ: ಚುನಾವಣೆಯಲ್ಲಿ ಸೋಲಲಿ ಗೆಲ್ಲಲಿ ನಿರಂತರ ಜನಸಾಮಾನ್ಯರ ಜೊತೆ ಬೆರೆತು ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶ್ರಮಿಸುತ್ತಿರುವ ಮಾಜಿ ಸಚಿವರಾದ ಕೆ. ಜಯಪ್ರಕಾಶ್ ಹೆಗ್ಡೆಯರಿಗೆ ಈ ಭಾರಿ ಸಚಿವ ಸ್ಥಾನದಲ್ಲಿ ಅವಕಾಶ ನೀಡಿ ಅವರನ್ನು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

ಕಾರ್ಯಕರ್ತರುಗಳ ನಂಬುಗೆಯ ನಾಯಕರು, ಸದಾ ಅಭಿವೃದ್ಧಿಯ ಯೋಚನೆಯ ಕನಸುಗಾರರು ಆ ಯೋಚನೆಯನ್ನು ಯೋಜನೆಯಾಗಿ ಕಾರ್ಯರೂಪಕ್ಕೆ ತರುವ ಭಗೀರಥರೂ, ಹಗಲು ರಾತ್ರಿ ಎನ್ನದೇ ಸದಾ ಜನಸಾಮಾನ್ಯರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಮಾತ್ರವಲ್ಲಾ ಅದಕ್ಕೊಂದು ಪರಿಹಾರ ನೀಡುವ ಜನನಾಯಕರೂ, ಉಡುಪಿ ಜಿಲ್ಲೆಯ ನಿರ್ಮಾಣಕಾರರೂ, ಕರಾವಳಿ ಅಭಿವೃದ್ಧಿಯ ಹರಿಕಾರರು, ಅಧಿಕಾರ ಇರಲಿ ಇಲ್ಲದೆ ಇರಲಿ ಸದಾ ಜನಸಾಮಾನ್ಯರ ನೋವು, ನಲಿವುಗಳಿಗೆ ಸದಾ ಸ್ಪಂದಿಸುವ, ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ, ಸಮರ್ಪಕವಾಗಿ, ಜನಪರವಾಗಿ ನಿರ್ವಹಿಸುವ ಮಾಜಿ ಸಚಿವರು, ಮಾಜಿ ಸಂಸದರೂ ಆದ ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ಈ ಭಾರಿ ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.


Spread the love
Subscribe
Notify of

0 Comments