ಜಿಲ್ಲಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಪೆರಂಪಳ್ಳಿ ಕ್ರೈಸ್ತ ಮಹಿಳಾ ಸಂಘಟನೆಯಿಂದ ಎಸ್ಪಿಗೆ ಮನವಿ
ಜಿಲ್ಲಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಪೆರಂಪಳ್ಳಿ ಕ್ರೈಸ್ತ ಮಹಿಳಾ ಸಂಘಟನೆಯಿಂದ ಎಸ್ಪಿಗೆ ಮನವಿ
ಉಡುಪಿ: ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ, ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ಇತರರ ಮೇಲೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಅನೀರೀಕ್ಷಿತ ಧಾಳಿ...
ರಿಪೇರಿ ಮಾಡಿತಂದ ಒಮಿನಿ ಕಾರಿಗೆ ಬೆಂಕಿ
ರಿಪೇರಿ ಮಾಡಿತಂದ ಒಮಿನಿ ಕಾರಿಗೆ ಬೆಂಕಿ
ಮಂಗಳೂರು: ಓಮಿನಿ ವಾಹನವೊಂದು ಬೆಂಕಿಗಾಹುತಿಯಾದ ಘಟನೆ ಲೈಟ್ ಹೌಸ್ ಬಳಿಯಲ್ಲಿ ಮಂಗಳವಾರ ನಡೆದಿದೆ.
...
ಪ್ರತಿಭಟನಾ ನಿರತ ಬಂಧಿತ ಮುಸ್ಲಿಂ ನಾಯಕರ ಬಿಡುಗಡೆಗೆ ಎಸ್ ಡಿಪಿಐ ಆಗ್ರಹ
ಪ್ರತಿಭಟನಾ ನಿರತ ಬಂಧಿತ ಮುಸ್ಲಿಂ ನಾಯಕರ ಬಿಡುಗಡೆಗೆ ಎಸ್ ಡಿಪಿಐ ಆಗ್ರಹ
ಮಂಗಳೂರು: ಮಂಗಳೂರು ಕಮೀಷನರ್ ಕಚೇರಿಯ ಮುಂಬಾಗದಲ್ಲಿ ಪ್ರತಿಭಟನಾನಿರತ ಮುಸ್ಲಿಂ ನಾಯಕರು ಮತ್ತು ಕಾರ್ಯಕರ್ತರನ್ನು ಪೋಲಿಸರು ಲಾಠಿಚಾರ್ಜ್ ಮಾಡಿ ಅಕ್ರಮವಾಗಿ ಬಂಧಿಸಿರುವುದನ್ನು ಸೋಷಿಯಲ್...
ಜಿಲ್ಲೆಯ ಅಕ್ರಮ ಮರಳುಗಾರಿಕೆ ಮಟ್ಟಹಾಕುವುದೇ ನನ್ನ ಗುರಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಜಿಲ್ಲೆಯ ಅಕ್ರಮ ಮರಳುಗಾರಿಕೆ ಮಟ್ಟಹಾಕುವುದೇ ನನ್ನ ಗುರಿ : ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ
ಉಡುಪಿ: ಜಿಲ್ಲೆಯಲ್ಲಿ ಇರುವ ಎಲ್ಲಾ ಅಕ್ರಮ ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದೆ ನನ್ನ ಪ್ರಮುಖ ಗುರಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ...
ಕಮೀಷನರ್ ಕಚೇರಿಗೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ; ಲಾಠಿಚಾರ್ಜ್
ಕಮೀಷನರ್ ಕಚೇರಿಗೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ; ಲಾಠಿಚಾರ್ಜ್
ಮಂಗಳೂರು: ನಗರ ಪೋಲಿಸ್ ಆಯುಕ್ತರ ಕಚೇರಿಯ ಎದುರುಗಡೆ ಧರಣಿ ನಡೆಸಲು ಪ್ರಯತ್ನಿಸಿದ ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ಇದರ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಚ್ ನಡೆಸಿದ...
ಉಡುಪಿ ಜಿಲ್ಲಾಧಿಕಾರಿಗಳ ಹತ್ಯೆ ಯತ್ನ ಕ್ಯಾಪ್ಟನ್ ಕಾರ್ಣಿಕ್ ಖಂಡನೆ
ಉಡುಪಿ ಜಿಲ್ಲಾಧಿಕಾರಿಗಳ ಹತ್ಯೆ ಯತ್ನ ಕ್ಯಾಪ್ಟನ್ ಕಾರ್ಣಿಕ್ ಖಂಡನೆ
ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರದ ಸಹಾಯಕ ಕಮಿಷನರ್ ಮತ್ತಿತರರ ಮೇಲೆ ಮರಳು ಮಾಫಿಯಾ ನಡೆಸಿದ ಕೊಲೆ ಯತ್ನವನ್ನು ವಿಧಾನ ಪರಿಷತ್ ವಿರೋಧ ಪಕ್ಷದ...
ತುಳು ವಸ್ತುಸಂಗ್ರಹಾಲಯ ನಾಡಿನ ನಿನ್ನೆಗಳನ್ನು ನಾಳೆಗೆ ತಲುಪಿಸುವ ರಾಯಭಾರಿಗಳು
ತುಳು ವಸ್ತುಸಂಗ್ರಹಾಲಯ ನಾಡಿನ ನಿನ್ನೆಗಳನ್ನು ನಾಳೆಗೆ ತಲುಪಿಸುವ ರಾಯಭಾರಿಗಳು
ಬಂಟ್ವಾಳ: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳದಲ್ಲಿ ‘ಮೌಖಿಕ ಕಥನ ಮತ್ತು ಭೌತಿಕ ವಸ್ತುಗಳು, ಸಾಮಾಜಿಕ ಚರಿತ್ರೆಯ ಪುನರ್‍ರಚನೆ’ ಎಂಬ ವಿಷಯದ...
ಅಕ್ರಮ ಮರಳು ಧಂಧೆಕೋರರಿಗೆ ಮುಂದೈತೆ ಮಾರಿ ಹಬ್ಬ! ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಚಿಂತನೆ
ಅಕ್ರಮ ಮರಳು ಧಂಧೆಕೋರರಿಗೆ ಮುಂದೈತೆ ಮಾರಿ ಹಬ್ಬ! ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಚಿಂತನೆ
ಮ್ಯಾಂಗಲೋರಿಯನ್ ಸುದ್ದಿಲೋಕ
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪರಿಶೀಲಸಲು ತೆರಳಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಕುಂದಾಪುರ ಉಪವಿಭಾಗಾಧಿಕಾರಿ ಶೀಲ್ಪಾ ನಾಗ್ ಹಾಗೂ ಇತರರ ಮೇಲೆ ನಡೆದ ಹಲ್ಲೆ ಮತ್ತು ಕೊಲೆಯತ್ನದಿಂದ ಸ್ವಲ್ಪವೂ ಜಿಲ್ಲಾಧಿಕಾರಿಯವರು ವಿಚಲಿತರಾಗಿಲ್ಲ ಎನ್ನುವುದು ಅವರ ದಿಟ್ಟತನ ಹಾಗೂ ಧ್ಯೆರ್ಯದ ಮಾತುಗಳಿಂದ ಎದ್ದು ಕಾಣುತ್ತದೆ.
ಭಾನುವಾರ ಮಧ್ಯರಾತ್ರಿ ಜಿಲ್ಲಾಧಿಕಾರಿ ಹಾಗೂ ಇತರರ ಮೇಲೆ ಹಲ್ಲೆ ಯತ್ನ ನಡೆದು ಅದಕ್ಕೆ ಸಂಬಂಧಿಸಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಹಾಗೂ ಇತರ ಕೆಲಸಗಳನ್ನು ಮುಗಿಸಿ ಎಂದಿನಂತೆ ಸಮಯಕ್ಕೆ ಸರಿಯಾಗಿ ಕಚೇರಿ ಕೆಲಸಕ್ಕೆ ಆಗಮಿಸಿದ ಅವರು ದಿನವಿಡೀ ಬಿಡುವಿಲ್ಲದ ಕೆಲಸಗಳಲ್ಲಿ ಮಗ್ನವಾಗಿ ಏನೂ ಆಗದಂತೆ ಇದ್ದಿರುವುದು ಅವರ ಧ್ಯೇರ್ಯವನ್ನು ಎತ್ತಿ ತೋರಿಸುತ್ತಿತ್ತು.
ಈ ನಡುವೆ ಬೆಳಿಗ್ಗೆ ಅವರನ್ನು ಭೇಟಿ ಮಾಡಲು ಬಂದ ಪತ್ರಕರ್ತರ ಬಳಿ ಹಿಂದಿನ ರಾತ್ರಿ ನಡೆದ ಘಟನೆಯ ಸಂಪೂರ್ಣ ವಿವರ ನೀಡುವುದರೊಂದಿಗೆ ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಮರಳು ಮಾಫಿಯಾಯನ್ನು ಮಟ್ಟ ಹಾಕದೇ ಬಿಡುವುದಿಲ್ಲ ಎಂಬ ದಿಟ್ಟ ಮಾತುಗಳನ್ನು ಅವರು ಆಡಿದ್ದಾರೆ. ಅಲ್ಲದೆ ನಿನ್ನೆ ನಡೆದ ಘಟನೆ ನನ್ನ ಮುಂದಿನ ಹೋರಾಟದ ಅಂತ್ಯವಾಗದೇ ಅದು ಆರಂಭವಾಗಲಿದೆ. ಜೀವ ಭಯವಿದ್ದರೂ ಕೂಡ ಹಲವರಿಂದ ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆ ತಡೆಯಲು ವಿಫವಾಗಿದೆ ಎಂಬ ಮಾಧ್ಯಮ ವರದಿ ಅವರನ್ನು ಸದಾ ಕಾಡುತ್ತಿದ್ದ ಪರಿಣಾಮ ಕೇವಲ ತನ್ನ ಗನ್ ಮ್ಯಾನ್ ಹಾಗೂ ಜಿಪಂನ ಹೊರಗುತ್ತಿಗೆ ಕಾರಿನ ಚಾಲಕನೊಂದಿಗೆ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಶೀಲ್ಪಾ ನಾಗ್ ಅವರ ಪತಿ ಹಾಗೂ ಅವರ ಡ್ರೈವರ್ ಜೊತೆ ಅಕ್ರಮ ಮರಳುಗಾರಿಕೆ ನಡೆಯುವಲ್ಲಿ ಸ್ವತಃ ಯಾರಿಗೂ ಮಾಹಿತಿ ನೀಡದೆ ತೆರಳಿದ್ದರು. ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅದು ಎಲ್ಲಿ ಸೋರಿಕೆಯಾಗುತ್ತದೆ ಇದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಆಲೋಚಿಸಿ ಬಂದ ಜಿಲ್ಲಾಧಿಕಾರಿ ತಂಡಕ್ಕೆ ಕಂಡ್ಲೂರಿನಲ್ಲಿ ನಡೆದ ಘಟನೆ ಒಂದು ರೀತಿಯಲ್ಲಿ ಆಘಾತವನ್ನು ತಂದಿದೆ ಆದರೂ ಕೂಡ ಅದನ್ನು ಸಾವರಿಸಿಕೊಂಡು ವಾಪಾಸ್ ಅಲ್ಲಿಂದ ಹೋಗವಾಗಲೇ ಅವರೊಂದು ಧೃಢ ನಿರ್ದಾರದೊಂದಿಗೆ ಉಡುಪಿ ನಗರ ಠಾಣೆಗೆ ಆಗಮಿಸಿದ್ದರು. ಅವರ ಚಾಲೆಂಜ್ ಪ್ರಕಾರ ಈ ಹೋರಾಟ ಯಾವುದೇ ಅಂತ್ಯವಾಗಲ್ಲ ಬದಲಾಗಿ ಮರಳುಗಾರಿಕೆಯ ವಿರುದ್ದ ಹೋರಾಟ ತೀವೃಗೊಳಿಸಲು ದಾರಿ ಮಾಡಿಕೊಟ್ಟಂತಾಗಿದೆ.
ಮುಂದಿನ ದಿನಗಳಲ್ಲಿ ಜೀವದ ಭಯದಿಂದಾಗಿ ಏಕಾಂಗಿಯಾಗಿ ನಡೆಸುವ ಧಾಳಿಯನ್ನು ಸಂಘಟಿತವಾಗಿ ಮಾಡಲು ನಿರ್ಧರಿಸಿರುವ ಜಿಲ್ಲಾಧಿಕಾರಿಗಳು ಇದಕ್ಕಾಗಿ ವಿಶೇಷ ಸ್ವ್ಯಾಡ್ ಒಂದನ್ನು ಸಿದ್ದಪಡಿಸಿ ಅದರ ಮೂಲಕ ಹೋರಾಟದ ರೂಪುರೇಷೆ ನಡೆಸಲಾಗುವುದು ಅಲ್ಲದೆ ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುವ ಚಿಂತನೆ ಅವರು ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಧಾಳಿ ಮಾಡುವುದರೊಂದಿಗೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಎಳ್ಳು ನೀರು ಬಿಡಬೇಕು ಎಂಬ ಚಿಂತನೆ ಅವರಲ್ಲಿದೆ. ಅವರ ಕನಸಿಗೆ ಅಧಿಕಾರಿ ವರ್ಗ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ವಿಶ್ವಾಸವನ್ನು ಅರು ಹೊಂದಿದ್ದು ಇದರಿಂದ ಅವರ ಸಾಧನೆಗೆ ಇನ್ನಷ್ಟು ಬಲ ಬರಲಿದೆ.
ಈ ನಡುವೆ ಸರಕಾರದ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್...
ನೀರು ಸರಬರಾಜಿನ ಅವ್ಯವಸ್ಥೆ ಬಿಜೆಪಿ ಪ್ರತಿಭಟನೆ ನಿರ್ಧಾರ
ನೀರು ಸರಬರಾಜಿನ ಅವ್ಯವಸ್ಥೆ ಬಿಜೆಪಿ ಪ್ರತಿಭಟನೆ ನಿರ್ಧಾರ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಾಸವನ್ನುಂಟು ಮಾಡಿ ವಾರದಲ್ಲಿ ಮೂರು ದಿನ ನೀರು ಪೂರೈಕೆ ಮಾಡದೆ ಎರಡು ದಿನ ನೀರು...
ಸೌಹಾರ್ದತೆಗಾಗಿ ಚಿಣ್ಣರ ನಡಿಗೆ ಉದ್ಘಾಟನೆ
ಸೌಹಾರ್ದತೆಗಾಗಿ ಚಿಣ್ಣರ ನಡಿಗೆ ಉದ್ಘಾಟನೆ
ಬೆಂಗರೆ: ಎಪ್ರಿಲ್ 6,7,8ರಂದು ಕಸ್ಬಾ ಬೆಂಗರೆ ಸರಕಾರಿ ಶಾಲೆಯಲ್ಲಿ ನಡೆಯಲಿರುವ `ಸೌಹಾರ್ದಯುತ ನಾಳೆಗಾಗಿ ಚಿಣ್ಣರ ಹಬ್ಬ' ಕಾರ್ಯಕ್ರಮದ ಪ್ರಚಾರಾರ್ಥ `ಸೌಹಾರ್ದತೆಗಾಗಿ ಚಿಣ್ಣರ ನಡಿಗೆ'ಯು ನಡೆಯಿತು. ಚಿಣ್ಣರ ನಡಿಗೆಯ ಉದ್ಘಾಟನೆಯನ್ನು...