ಮಂಗಳೂರು: ನಾಲ್ವರು ಅಪ್ರಾಪ್ತರು ಸೇರಿ 11 ಮಂದಿ ಬಾಂಗ್ಲಾದೇಶಿ ಪ್ರಜೆಗಳ ಬಂಧನ

Spread the love

ಮಂಗಳೂರು: ನಾಲ್ವರು ಅಪ್ರಾಪ್ತರು ಸೇರಿ 11 ಮಂದಿ ಬಾಂಗ್ಲಾದೇಶಿ ಪ್ರಜೆಗಳ ಬಂಧನ

ಮಂಗಳೂರು: ನಗರದ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಒಟ್ಟು 11 ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.

ಬಂಧಿತರೆಲ್ಲರೂ ಬಾಂಗ್ಲಾದೇಶದ ಢಾಕಾ ವಿಭಾಗದ ‘ರಾಜಶಾಹಿ’ (Rajshahi Zilla) ಜಿಲ್ಲೆಯ ವಿವಿಧ ಗ್ರಾಮಗಳಿಗೆ ಸೇರಿದವರಾಗಿದ್ದಾರೆ.

ಮೊಹಮ್ಮದ್ ಕೌಸರ್ ಅಲಿ (21 ವರ್ಷ), ಮೊಹಮ್ಮದ್ ನೂರ್ ಅಮೀನ್ (34 ವರ್ಷ), ಮೊಹಮ್ಮದ್ ನಾಹಿದುಲ್ ಇಸ್ಲಾಂ (22 ವರ್ಷ), ಮೊಹಮ್ಮದ್ ಹುಮಾಯೂನ್ ಕಬೀರ್ (22 ವರ್ಷ), ಮೊಹಮ್ಮದ್ ರಂಜಾನ್ ಅಲಿ (23 ವರ್ಷ), ಮೊಹಮ್ಮದ್ ಅಬ್ದುಲ್ ರಹಮಾನ್ ರಾಯೆಲ್ (19 ವರ್ಷ), ಮೊಹಮ್ಮದ್ ನೋಯಾನ್ (24 ವರ್ಷ) ಬಂಧಿತರು. ಬಂಧಿತರಲ್ಲಿ ನಾಲ್ವರು ಅಪ್ರಾಪ್ತರಿದ್ದಾರೆ.

ಬಾಂಗ್ಲಾದೇಶದ ಪ್ರಜೆಗಳನ್ನು ವಶದಲ್ಲಿಟ್ಟುಕೊಳ್ಳಲು ಹಾಗೂ ಅವರ ಸ್ವದೇಶಕ್ಕೆ ಮರಳಿ ಕಳುಹಿಸಲು ಅಗತ್ಯವಿರುವ ಕಾನೂನು ಆದೇಶಗಳನ್ನು ಹೊರಡಿಸುವಂತೆ ಕೋರಿ ‘ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿ’ಗೆ (FRRO) ಶೀಘ್ರದಲ್ಲೇ ಅಧಿಕೃತ ವರದಿಯನ್ನು ರವಾನಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಬಂಧಿತರ ಬಳಿ ಇರುವ ದಾಖಲೆ ಪತ್ರಗಳ ಪರಿಶೀಲನೆ ಮತ್ತು ಸಂಗ್ರಹಣೆ ಪ್ರಕ್ರಿಯೆ ತೀವ್ರಗತಿಯಲ್ಲಿ ನಡೆಯುತ್ತಿದೆ.


Spread the love
Subscribe
Notify of

0 Comments