ಕುಡುಬಿ ಸಮುದಾಯವನ್ನು ಪ. ಪಂಗಡಕ್ಕೆ ಸೇರಿಸಲು ರಾಜ್ಯದಿಂದ ಸಮ್ಮತಿ : ಐವನ್‌ ಡಿಸೋಜಾ

Spread the love

ಕುಡುಬಿ ಸಮುದಾಯವನ್ನು ಪ. ಪಂಗಡಕ್ಕೆ ಸೇರಿಸಲು ರಾಜ್ಯದಿಂದ ಸಮ್ಮತಿ : ಐವನ್‌ ಡಿಸೋಜಾ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗದಲ್ಲಿ ಅಧಿಕವಾಗಿರುವ ಕುಡುಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹಲವು ವರ್ಷಗಳಿಂದ ಒತ್ತಾಯಗಳು ಕೇಳಿ ಬರುತ್ತಿದ್ದು, ಇದೀಗ ಸರಕಾರ ಪ್ರವರ್ಗ-1ರಿಂದ ಕುಡುಬಿ ಸಮುದಾಯವನ್ನು ಪ. ಪಂಗಡಕ್ಕೆ ಸೇರಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅನುಮತಿ ಸಿಕ್ಕಿದ್ದು, ಕೇಂದ್ರ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಸದ ಕ್ಯಾಬ್ರಿಜೇಶ್ ಚೌಟ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದರು.

ಮಂಗಳೂರಿನ ಪಾಲಿಕೆಯ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕುಡುಬಿ ಸಮುದಾಯವನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಬಗ್ಗೆ 2015ರಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಮೂಲಕ ಇನ್ಸಿಟ್ಯೂಟ್ ಫಾರ್ ಸೋಷಿಯಲ್ ಎಕೊನಾಮಿಕ್ ಆ್ಯಂಡ್ ಚೇಂಜ್ ಮೂಲಕ ಕುಲಶಾಸ್ತ್ರಿಗಳ ಅಧ್ಯಯನ ನಡೆಸಲು ಆದೇಶವಾಗಿತ್ತು. ಅಧ್ಯಯನ ನಡೆಸಿ 2021ರಲ್ಲಿ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ವರದಿಯಲ್ಲಿ ಕುಡುಬಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಿಫಾರಸ್ಸು ಮಾಡಲಾಗಿದೆ. ಆದರಂತೆ ಸರಕಾರ ಕ್ರಮ ವಹಿಸಿದೆ ಎಂದರು.


Spread the love
Subscribe
Notify of

0 Comments
Inline Feedbacks
View all comments