ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ತಕ್ಷಣ ಚರಂಡಿ ಹೂಳೆತ್ತಲು ಬ್ಲಾಕ್ ಕಾಂಗ್ರೆಸ್ ಆಗ್ರಹ

Spread the love

ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ತಕ್ಷಣ ಚರಂಡಿ ಹೂಳೆತ್ತಲು ಬ್ಲಾಕ್ ಕಾಂಗ್ರೆಸ್ ಆಗ್ರಹ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಮಳೆಗಾಲದ ಪೂರ್ವಭಾವಿ ಮಳೆ ಪ್ರಾರಂಭವಾಗಿದ್ದು, ಕೂಡಲೇ ನಗರಸಭೆಯ ಅಧಿಕಾರಿಗಳು ಚರಂಡಿಯ ಹೂಳೆತ್ತುವ ಹಾಗೂ ಅಪಾಯಕಾರಿ ಮರಗಳ ರೆಂಬೆ ಕಡಿಯುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.

ನಗರದ 35 ವಾರ್ಡ್ಗಳಲ್ಲಿ ಮಳೆ ನೀರು ಹರಿಯುವ ಚರಂಡಿಗಳಲ್ಲಿ ಹೂಳು ತೆಗೆಯುವ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಅಲ್ಲದೆ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಯಾ ರೆಂಬೆ ಕಡಿಯುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಬಗ್ಗೆ ನಗರಸಭೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರಿಸುತ್ತಿಲ್ಲ. ಮಳೆಗಾಲದ ಪ್ರಾರಂಭವಾದುದರಿಂದ ಮಳೆ ಜೋರಾಗಿ ಸುರಿದರೆ ತೋಡು ಹಳ್ಳ ತುಂಬಿ ಮನೆಗಳಿಗೆ ಕೃತಕ ನೆರೆ ನೀರು ತುಂಬುವ ಸಾಧ್ಯತೆ ಇದೆ. ಈಗಾಗಲೇ ಕೋವಿಡ್-19 ನಿಮಿತ್ತ ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ಜನರು ಕಷ್ಟ ನಷ್ಟಕ್ಕೊಳಗಾಗುವ ಸಾದ್ಯತೆ ಇರುವುದರಿಂದ ಕೂಡಲೇ ನಗರಸಭೆಯ ಅಧಿಕಾರಿಗಳು ಚರಂಡಿಯ ಹೂಳೆತ್ತುವ ಹಾಗೂ ಅಪಾಯಕಾರಿ ಮರಗಳ ರೆಂಬೆ ಕಡಿಯುವ ಬಗ್ಗೆ ಸೂಕ್ತ ಕ್ರಮಗಳನ್ನು ತಕ್ಷಣ ಜರೂರು ನೆಲೆಯಲ್ಲಿ ಕೈಗೊಳ್ಳಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸತೀಶ್ ಅಮೀನ್ ಪಡುಕೆರೆ, ನಗರಸಭಾ ಸದಸ್ಯರಾದ ರಮೇಶ್ ಕಾಂಚನ್, ವಿಜಯ ಪೂಜಾರಿ, ಸೆಲಿನ್ ಕರ್ಕಡ, ಅಮೃತಾ ಕೃಷ್ಣಮೂರ್ತಿ ಆಚಾರ್ಯ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕಾರ್ ಅವರು ಪ್ರಕಟಣೆಯಲ್ಲಿ ನಗರಸಭಾ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.


Spread the love