ಪೊಲೀಸ್ ಕಮೀಷನರ್ ಚಂದ್ರಸೇಖರ್ ಅವರಿಗೆ ಜನಪರ ಸಂಘಟನೆಗಳಿಂದ ಬಿಳ್ಕೋಡುಗೆ

Spread the love

ಪೊಲೀಸ್ ಕಮೀಷನರ್ ಚಂದ್ರಸೇಖರ್ ಅವರಿಗೆ ಜನಪರ ಸಂಘಟನೆಗಳಿಂದ ಬಿಳ್ಕೋಡುಗೆ

ಮಂಗಳೂರು: ಮಂಗಳೂರಿನಿಂದ ವರ್ಗಾವಣೆಗೊಂಡಿರುವ ದಕ್ಷ ಪೊಲೀಸ್ ಕಮೀಷನರ್ ಚಂದ್ರಸೇಖರ್ ಅವರಿಗೆ ನಗರದ ಜನಪರ ಸಂಘಟನೆಗಳ, ನಾಗರಿಕರ ಪರವಾಗಿ ಹಾರ್ದಿಕವಾಗಿ ವಿದಾಯ ಕೋರಲಾಯಿತು.

ಒಂದೂವರೆ ವರ್ಷಗಳ ಸೇವಾ ಅವಧಿಯಲ್ಲಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಿಡಲು ಚಂದ್ರಸೇಖರ್ ಕೈಗೊಂಡ ಪ್ರಾಮಾಣಿಕ ಪ್ರಯತ್ನಕ್ಕಾಗಿ ಅವರನ್ನು ಅಭಿನಂದಿಸಲಾಯಿತು. Mrpl ವಿರುದ್ದ ಜೋಕಟ್ಟೆ ನಾಗರಿಕರು ನಡೆಸುತ್ತಿದ್ದ ಹೋರಾಟವನ್ನು ಧನಾತ್ಮಕವಾಗಿ ನಡೆಸಿಕೊಂಡದ್ದು, ಬಾಳಿಗಾ, ಕಾರ್ತಿಕ್ ರಾಜ್ ಕೊಲೆ ಪ್ರಕರಣಗಳನ್ನು ಬಯಲಿಗೆಳೆದದ್ದು, ಪಿನರಾಯಿ ವಿಜಯನ್ ಆಗಮನದ ಸಂದರ್ಭದ ಉದ್ವಿಗ್ನತೆಯನ್ನು ನಿಭಾಯಿಸಿದ್ದು, ಕೋಮುಶಕ್ತಿಗಳು, ಅನೈತಿಕ ಪೊಲೀಸ್ ಗಿರಿಯ ವಿರುದ್ದ ಕಠಿಣ ಕ್ರಮಕೈಗೊಂಡದ್ದು, ಭೂಗತ ಜಗತ್ತನ್ನು ಹದ್ದು ಬಸ್ತಿನಲ್ಲಿಡಲು ಶ್ರಮಿಸಿದ್ದನ್ನು ನೆನಪಿಸಿ ಅವರ ಮುಂದಿನ‌ ಸೇವಾವಧಿಯಲ್ಲಿ ಯಶಸ್ಸನ್ನು ಹಾರೈಸಲಾಯಿತು.

ವಿಚಾರವಾದಿ ಪ್ರೊ ನರೇಂದ್ರ ನಾಯಕ್ , dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಹಿರಿಯ ದಲಿತ ನಾಯಕ M ದೇವದಾಸ್. ಜನವಾದಿ ಮಹಿಳಾ ಸಂಘಟನೆಯ ಜಯಂತಿ ಬಿ ಶೆಟ್ಟಿ, Dss ಮುಖಂಡ ವಿಶು ಕುಮಾರ್ , sfi ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, dyfi ಮುಖಂಡರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ಸಾದಿಕ್ ಕಣ್ಣೂರು, ಸಾಮಾಜಿಕ ಕಾರ್ಯಕರ್ತ ಬಾವಾ ಪದರಂಗಿ ಉಪಸ್ಥಿತರಿದ್ದರು.


Spread the love